ತಿರುವನಂತಪುರಂ, ಆ 3 (Daijiworld News/MSP): ಸೋಶಿಯಲ್ ಮೀಡಿಯಾಗಳಾದ ಫೇಸ್ಬುಕ್ ಮತ್ತು ವಾಟ್ಸಾಪ್ ಮೂಲಕ ಸಕ್ರಿಯವಾಗಿರುವ ಕೇರಳ ಪೊಲೀಸರು ಈಗ ಇಂಟರ್ನೆಟ್ ಸೆನ್ಸೇಷನ್ ಅಪ್ಲಿಕೇಷನ್ ಟಿಕ್ಟಾಕ್ ಗೂ ಕಾಲಿರಿಸಿದ್ದಾರೆ. ಹೀಗಾಗಿ ಕೇರಳದಲ್ಲಿ ಟಿಕ್ ಟಾಕ್ ಮೂಲಕ ಕೇರಳ ಪೊಲೀಸರು ತಮ್ಮ ಹವಾ ಕ್ರೀಯೆಟ್ ಮಾಡಿದ್ದಾರೆ.
ಇದು ಎಷ್ಟರ ಮಟ್ಟಿಗೆ ಎಂದ್ರೆ ನ್ಯೂಯಾರ್ಕ್ ಪೊಲೀಸ್ ಇಲಾಖೆ (ಎನ್ವೈಪಿಡಿ)ಯನ್ನು ಹಿಂದಿಕ್ಕುವಷ್ಟು. ಹೌದು ಸಾಮಾಜಿಕ ಮಾಧ್ಯಮಗಳನ್ನು ನ್ಯೂಯಾರ್ಕ್ ಪೊಲೀಸ್ ಇಲಾಖೆಯೂ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದು, ಜನಪ್ರಿಯತೆಯಲ್ಲಿ ನ್ಯೂಯಾರ್ಕ್ ಪೊಲೀಸ್ ರನ್ನು ಮೀರಿಸಿ ಕೇರಳ ಪೊಲೀಸ್ ಬೆಳೆಯುತ್ತಿದೆ. ಕೇರಳ ಪೊಲೀಸರ ಅಧಿಕೃತ ಫೇಸ್ಬುಕ್ ಪುಟವು ಈ ವರ್ಷದ ಆರಂಭದಲ್ಲಿ ಒಂದು ಮಿಲಿಯನ್ ಲೈಕ್ಗಳನ್ನು ಗಳಿಸುವ ಮೂಲಕ ಅಪರೂಪದ ಸಾಧನೆ ಮಾಡಿತ್ತು,
ಇತ್ತೀಚೆಗೆ ಸೋಶಿಯಲ್ ಮೀಡಿಯದಲ್ಲಿ ಟಿಕ್ ಟಾಕ್ ಜನಪ್ರೀಯತೆಯನ್ನು ಪಡೆದುಕೊಳ್ಳುತ್ತಿದ್ದು, ಇದೊಂದು ಕಿರು-ರೂಪದ ಮೊಬೈಲ್ ವೀಡಿಯೊಗಳನ್ನು ಹಾಕುವ ತಾಣವಾಗಿದೆ. ಇದು ತನ್ನ ಬಳಕೆದಾರರಿಗೆ ತಮ್ಮ ಸಣ್ಣ ವೈಯಕ್ತಿಕ ವೀಡಿಯೊಗಳನ್ನು ಅಪ್ಲೋಡ್ ಮಾಡಲು ಮತ್ತು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ.
“ಟಿಕ್ಟಾಕ್ ಮೂಲಕ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷಾ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದ್ದೇವೆ, ನಮ್ಮ ಅಧಿಕೃತ ಟಿಕ್ಟಾಕ್ ಖಾತೆಯಲ್ಲಿ ಜಾಗೃತಿಗೆ ಸಂಬಂಧಿಸಿದ ವಿಡೀಯೋ ಈಗಾಗಲೇ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ ಮತ್ತು ಹಂಚಿಕೊಂಡಿದ್ದಾರೆ ”ಎಂದು ಕೇರಳ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಕೇರಳಾ ಫೇಸ್ಬುಕ್ ಪುಟವು ಈ ವರ್ಷದ ಆರಂಭದಲ್ಲಿ ಒಂದು ಮಿಲಿಯನ್ ಲೈಕ್ ಪಡೆದ ಹಿನ್ನಲೆಯಲ್ಲಿ ಫೇಸ್ಬುಕ್ ಇಂಡಿಯಾ (ಟ್ರಸ್ಟ್ ಮತ್ತು ಸೇಫ್ಟಿ) ಮುಖ್ಯಸ್ಥ ಸತ್ಯ ಯಾದವ್ ಅವರು ಇಲ್ಲಿನ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಸ್ಮಾರಕವನ್ನು ಹಸ್ತಾಂತರಿಸಿದರು.
ಕೇರಳ ಪೊಲೀಸ್ ಸೋಶಿಯಲ್ ಮೀಡಿಯ ತಂಡದಲ್ಲಿ ಹಿರಿಯ ಸಿವಿಲ್ ಪೊಲೀಸ್ ಅಧಿಕಾರಿಗಳಾದ ಕಮಲನಾಥ್, ಬಿಮಲ್ ವಿ ಎಸ್ ಮತ್ತು ಸಿವಿಲ್ ಪೊಲೀಸ್ ಅಧಿಕಾರಿಗಳಾದ ಸಂತೋಷ್ ಪಿ ಎಸ್ ಮತ್ತು ಅರುಣ್ ಬಿ ಟಿ. ಮುಂತಾದವರು ಇದ್ದಾರೆ.
ಈ ತಂಡದ ನೇತೃತ್ವವನ್ನು ಎಡಿಜಿಪಿ ಮನೋಜ್ ಅಬ್ರಹಾಂ ವಹಿಸಿದ್ದಾರೆ.