ಬೆಂಗಳೂರು, ಆ3 (Daijiworld News/RD): ಮೈತ್ರಿ ಸರ್ಕಾರವನ್ನು ಪತನಗೊಳಿಸಿ, ಬಹಳ ತರಾತುರಿಯಲ್ಲಿ ಪ್ರಮಾಣವಚನ ಸ್ವೀಕರಿಸಿ ಸಿಎಂ ಆಗಿ ನೇಮಕಗೊಂಡ ಬಿಎಸ್ವೈ, ಇದೀಗ ಸಂಪುಟ ರಚನೆ ಮಾಡುವಲ್ಲಿ ಯಾಕೆ ವಿಳಂಬ ಧೋರಣೆಯನ್ನು ತೋರುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟ್ವೀಟರ್ನಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ರಾಜ್ಯದಲ್ಲಿ ಅತಿವೃಷ್ಟಿ-ಅನಾವೃಷ್ಟಿಗಳಿಂದ ಜನ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಸ್ಪಂದಿಸಬೇಕಾದುದು ಸರ್ಕಾರದ ಕರ್ತವ್ಯ. ಕಂದಾಯ ಇಲಾಖೆ, ಕೃಷಿ ಇಲಾಖೆ, ಗ್ರಾಮೀಣ ಅಭಿವೃದ್ಧಿ ಇಲಾಖೆ ಇತ್ಯಾದಿ ಹುದ್ದೆಗಳಲ್ಲಿ ಸಚಿವರೇ ಇಲ್ಲ. ಈ ಎಲ್ಲದರ ನಡುವೆ ಸಂಪುಟ ವಿಸ್ತರಣೆ ಸರ್ಕಾರ ಮೊದಲು ಮಾಡಬೇಕೇ ಹೊರತು ಅಧಿಕಾರಿಗಳ ವರ್ಗಾವಣೆ ಅಲ್ಲ. ಸಂಪುಟ ವಿಸ್ತರಣೆಗೆ ಮೊದಲ ಆದ್ಯತೆ ನೀಡಿದ್ದು ಸರಿಯಲ್ಲ. ಎಂದು ನಿನ್ನೆಯಷ್ಟೇ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಬಿಜೆಪಿ ಸರ್ಕಾರದ ಆದೇಶವನ್ನು ಕುಟುವಾಗಿ ಟೀಕಿಸಿದರು.
ಬಿಎಸ್ವೈ ಮುಖ್ಯಮಂತ್ರಿಯಾಗಿ ದಿನಗಳೇ ಉರುಳಿ ಹೋದರು ಇನ್ನೂ ಸಚಿವ ಸಂಪುಟ ರಚನೆಯಾಗಿಲ್ಲ, ಜೊತೆಗೆ ಧಿಡೀರನೆ ಅಧಿಕಾರಿಗಳ ವರ್ಗಾವಣೆ ಯಾವ ಕಾರಣಕ್ಕಾಗಿ ಮಾಡುತ್ತಿರುವುದು ಈ ಎಲ್ಲಾ ವಿಚಾರದ ಕುರಿತು ತನ್ನ ಟ್ವಿಟರ್ ಖಾತೆಯಲ್ಲಿ ಹೇಳಿದ್ದಾರೆ.