ಬೆಂಗಳೂರು,ಆ 4 (Daijiworld News/RD): ರೌಡಿಗಳಗಳಲ್ಲಿ ನಡುಕ ಹುಟ್ಟಿಸಿ, ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ದಕ್ಷ ಪೊಲೀಸ್ ಕಮೀಷನರ್ ಆದ ಅಲೋಕ್ ಕುಮಾರ್ ಅಧಿಕಾರಕ್ಕೆ ಬಂದು 42 ದಿನಗಳಲ್ಲಿ ವರ್ಗಾವಣೆ ಮಾಡಿದೆ. ಹಾಗಾಗಿ ಒಂದೇ ಸಮನೆ ವರ್ಗಾವಣೆ ಮಾಡುವುದು ಸರಿಯಲ್ಲ, ಇದರಿಂದಾಗಿ ನನ್ನ ಕುಟುಂಬದವರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಅಲೋಕ್ ಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಸರಿಯಾದ ಕಾರಣ ತಿಳಿಸಿ ಸ್ವಲ್ಪ ಅವಧಿ ನೀಡಿ ವರ್ಗಾವಣೆ ನೀಡಬೇಕು, ಅದರ ಬದಲು ವಿನಾಕಾರಣವಾಗಿ ವರ್ಗಾವಣೆ ನೀಡುವುದು ಸರಿಯಲ್ಲ. ಇದರಿಂದಾಗಿ ನನ್ನ ಮನೆಯವರಿಗೆ ತೊಂದರೆ ಕೊಡಲಾಗುತ್ತಿದೆ ಎಂದು ಆರೋಪಿಸಿದರು.
ಕನಿಷ್ಠ 1 ವರ್ಷದ ಅಧಿಕಾರವನ್ನು ಅಧಿಕಾರಿಗಳಿಗೆ ನೀಡಲಾಗುತ್ತದೆ ಎಂದು ಕರ್ನಾಟಕ ಪೊಲೀಸ್ ಕಾಯ್ದೆಯಲ್ಲಿ ಉಲ್ಲೇಖವಿದ್ದು, ಹಾಗಾಗಿ 20 ದಿನಗಳಿಂದ ಅಧಿಕೃತ ನಿವಾಸದಲ್ಲಿ ನಾವು ವಾಸಿಸುತ್ತಿದ್ದೇವೆ. ಈಗ, ಇದಕ್ಕಿದ್ದಂತೆ ವರ್ಗಾವಣೆ ಮಾಡಿರುವುದರಿಂದ ತೊಂದರೆಯಾಗಿದೆ. ಇದರ ಬಗ್ಗೆ ಇನ್ನು ಕೇಂದ್ರಿಯ ಆಡಳಿತಾತ್ಮಕ ನ್ಯಾಯಮಂಡಳಿಗೆ ದೂರು ನೀಡುವುದಿಲ್ಲ ಎಂದು ಅವರು ತಿಳಿಸಿದರು. ಅಲೋಕ್ ಕುಮಾರ್ ಕೆಎಸ್ಆರ್ಪಿ ಎಡಿಜಿಪಿಯಾಗಿ ವರ್ಗಾವಣೆಯಾಗಿದ್ದು, ಭಾಸ್ಕರ್ ರಾವ್ ನೂತನ ಕಮೀಷನರ್ ಆಗಿ ನೇಮಕಗೊಂಡಿದ್ದಾರೆ.