ನವದೆಹಲಿ, ಮಾ. 14 (DaijiworldNews/TA): ದೇಶದಲ್ಲಿ ಎಲ್ಪಿಜಿ ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಿಲ್ಲ ಮತ್ತು ಬೇಕಾದಷ್ಟು ಸಂಗ್ರಹವಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದರೂ, ಹಲವಾರು ಗ್ರಾಹಕರಿಗೆ ಆ್ಯಪ್ ಅಥವಾ ಆನ್ಲೈನ್ ಮೂಲಕ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಸಾಧ್ಯವಾಗದೆ ಸಮಸ್ಯೆ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಫೋನ್, ಮಿಸ್ಡ್ ಕಾಲ್, ಎಸ್ಎಂಎಸ್ ಹಾಗೂ ವಾಟ್ಸ್ಆಪ್ ಮೂಲಕ ಸಿಲಿಂಡರ್ ಅನ್ನು ಹೇಗೆ ಸುಲಭವಾಗಿ ಬುಕ್ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ.

ಜಾಗತಿಕ ಪರಿಸ್ಥಿತಿಗಳ ಪರಿಣಾಮ ಇಂಧನ ಮತ್ತು ಗ್ಯಾಸ್ ಕೊರತೆ ಎದುರಾಗಬಹುದು ಎಂಬ ಆತಂಕದಿಂದ ಹಲವರು ಮುಂಚಿತವಾಗಿಯೇ ಸಿಲಿಂಡರ್ ಬುಕ್ ಮಾಡುತ್ತಿದ್ದಾರೆ. ಇದರಿಂದಾಗಿ ಬುಕಿಂಗ್ ನಡುವಿನ ಕನಿಷ್ಠ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ವಿಸ್ತರಿಸಲಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ. ಗ್ರಾಮೀಣ ಗ್ರಾಹಕರಿಗೆ ಈ ಅವಧಿಯನ್ನು 45 ದಿನಗಳಿಗೆ ಹೆಚ್ಚಿಸಲಾಗಿದೆ.
ಭಾರತ್ ಗ್ಯಾಸ್ ಬುಕಿಂಗ್ ವಿಧಾನ : ಭಾರತ್ ಪೆಟ್ರೋಲಿಯಂ ಅಡಿಯಲ್ಲಿ ಇರುವ ಭಾರತ್ ಗ್ಯಾಸ್ ಗ್ರಾಹಕರು ಕೆಳಗಿನ ವಿಧಾನಗಳ ಮೂಲಕ ಸಿಲಿಂಡರ್ ಬುಕ್ ಮಾಡಬಹುದು.
IVRS ಮೂಲಕ: ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 7715012345 ಅಥವಾ 7718012345 ಗೆ ಕರೆ ಮಾಡಿ.
SMS ಮೂಲಕ: ನೋಂದಾಯಿತ ಮೊಬೈಲ್ ಸಂಖ್ಯೆಯಿಂದ LPG ಎಂದು ಸಂದೇಶವನ್ನು 7715012345 ಅಥವಾ 7718012345 ಗೆ ಕಳುಹಿಸಿ.
WhatsApp ಮೂಲಕ: 1800224344 (BPCL Smartline) ಸಂಖ್ಯೆಯನ್ನು ಸೇವ್ ಮಾಡಿ “Hi” ಅಥವಾ “Book” ಎಂದು ಮೆಸೇಜ್ ಕಳುಹಿಸಿ.
ಮೊಬೈಲ್ ಅಪ್ಲಿಕೇಶನ್: Play Store ನಲ್ಲಿ BharatGas App ಡೌನ್ಲೋಡ್ ಮಾಡಿ ಲಾಗಿನ್ ಮಾಡಿ ‘Refill Cylinder’ ಆಯ್ಕೆ ಮಾಡಿ.
ಇತರೆ ಅಪ್ಲಿಕೇಶನ್ಗಳು: UMANG ಮೂಲಕವೂ ಬುಕಿಂಗ್ ಮಾಡಬಹುದು.
HP ಗ್ಯಾಸ್ ರೀಫಿಲ್ ಬುಕಿಂಗ್ : ಹಿಂದೂಸ್ತಾನ್ ಪೆಟ್ರೋಲಿಯಂ ಅಡಿಯಲ್ಲಿ ಇರುವ HP Gas ಗ್ರಾಹಕರು ಈ ವಿಧಾನಗಳನ್ನು ಬಳಸಬಹುದು.
HP Pay App: Android ಮತ್ತು iOS ನಲ್ಲಿ ಲಭ್ಯ.
IVRS: 88888 23456 ಗೆ ಕರೆ ಮಾಡಿ.
Missed Call: 94936 02222 ಗೆ ಮಿಸ್ಡ್ ಕಾಲ್ ನೀಡಿ.
WhatsApp: 92222 01122 ಗೆ “Hi” ಎಂದು ಮೆಸೇಜ್ ಕಳುಹಿಸಿ.
ವೆಬ್ಸೈಟ್: myhpgas.in ನಲ್ಲಿ ಬುಕ್ ಮಾಡಬಹುದು.
ಇತರೆ Apps: Amazon Pay, Paytm, PhonePe ಮುಂತಾದ BBPS ಆ್ಯಪ್ಗಳ ಮೂಲಕವೂ ಬುಕ್ ಮಾಡಬಹುದು.
Indane ಗ್ಯಾಸ್ ರೀಫಿಲ್ ಬುಕಿಂಗ್ : ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಡಿಯಲ್ಲಿ ಇರುವ Indane Gas ಗ್ರಾಹಕರು ಈ ಮಾರ್ಗಗಳನ್ನು ಬಳಸಬಹುದು.
SMS/IVRS: 7718955555 ಗೆ ಕರೆ ಮಾಡಿ ಅಥವಾ REFILL ಎಂದು SMS ಕಳುಹಿಸಿ.
Missed Call: 8454955555 ಗೆ ಮಿಸ್ಡ್ ಕಾಲ್ ನೀಡಿ.
WhatsApp: 7588888824 ಗೆ REFILL ಎಂದು ಮೆಸೇಜ್ ಕಳುಹಿಸಿ.
ಮೊಬೈಲ್ ಅಪ್ಲಿಕೇಶನ್: IndianOil One App ಮೂಲಕ ಬುಕ್ ಮಾಡಬಹುದು.
ಆನ್ಲೈನ್ ಪೋರ್ಟಲ್: cx.indianoil.in ಮೂಲಕವೂ ರೀಫಿಲ್ ಮನವಿ ಸಲ್ಲಿಸಬಹುದು.
ತುರ್ತು ಸಹಾಯವಾಣಿ : LPG ಸೋರಿಕೆ ಅಥವಾ ಸುರಕ್ಷತಾ ತುರ್ತು ಸಂದರ್ಭಗಳಲ್ಲಿ ಗ್ರಾಹಕರು ರಾಷ್ಟ್ರೀಯ LPG ತುರ್ತು ಸಂಖ್ಯೆ 1906 ಗೆ ಕರೆ ಮಾಡಬಹುದು.
ಗ್ರಾಹಕ ಸಹಾಯಕ್ಕಾಗಿ ಟೋಲ್-ಫ್ರೀ ಸಂಖ್ಯೆ : 1800-2333-555 ಕೂಡ ಲಭ್ಯವಿದೆ.