ಬೆಂಗಳೂರು, ಮಾ. 18 (DaijiworldNews/T A): ರಾಜ್ಯದಲ್ಲಿ ಎಲ್ಪಿಜಿ ಗ್ಯಾಸ್ ವಿತರಣೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅಗತ್ಯ ಸೇವಾ ವಲಯಗಳಿಗೆ ಮೊದಲ ಆದ್ಯತೆ ನೀಡಲಾಗಿದ್ದು, ನಾಳೆಯಿಂದಲೇ ಈ ನಿಯಮಗಳು ಜಾರಿಯಾಗಲಿವೆ.

ಸರ್ಕಾರ ಹೊರಡಿಸಿರುವ ಗೈಡ್ಲೈನ್ಸ್ ಪ್ರಕಾರ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಶೇ.100ರಷ್ಟು ಗ್ಯಾಸ್ ವಿತರಣೆ ಮಾಡಲು ಸೂಚಿಸಲಾಗಿದೆ. ಇನ್ನುಳಿದ ಪ್ರಮುಖ ವಲಯಗಳಿಗೂ ನಿರ್ದಿಷ್ಟ ಪ್ರಮಾಣದಲ್ಲಿ ಗ್ಯಾಸ್ ಹಂಚಿಕೆ ಮಾಡುವಂತೆ ಏಜೆನ್ಸಿ ಕಂಪನಿಗಳಿಗೆ ಸೂಚನೆ ನೀಡಲಾಗಿದೆ.
ವಲಯವಾರು ಗ್ಯಾಸ್ ವಿತರಣೆಯ ಪ್ರಮಾಣ:
ಆಸ್ಪತ್ರೆಗಳು – 100%
ಶೈಕ್ಷಣಿಕ ಸಂಸ್ಥೆಗಳು – 100%
ಸೀಡ್ ಪ್ರೊಸೆಸಿಂಗ್ ಘಟಕಗಳು – 70%
ಆಯಿಲ್ ಉತ್ಪಾದನಾ ಕಂಪನಿಗಳು – 70%
ಏರ್ಲೈನ್ಸ್ ಮತ್ತು ರೈಲ್ವೆ – 70%
ವೃದ್ಧಾಶ್ರಮಗಳು – 70%
ಇಂಡಸ್ಟ್ರಿಯಲ್ ಕ್ಯಾಂಟೀನ್ಗಳು – 10%
ಕಾರ್ಪೋರೇಟ್ ಗೆಸ್ಟ್ ಹೌಸ್ಗಳು – 10%
ಫುಡ್ ಪ್ರೊಸೆಸಿಂಗ್ ಕಂಪನಿಗಳು – 10%
ಹೋಟೆಲ್ಗಳು – 10%
ಸರ್ಕಾರವು ಅಗತ್ಯ ಸೇವೆಗಳ ನಿರಂತರ ಕಾರ್ಯಾಚರಣೆಗೆ ಆದ್ಯತೆ ನೀಡಿರುವುದಾಗಿ ತಿಳಿಸಿದೆ. ಅದರಂತೆ, ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಕಾರ್ಯಾಚರಣೆಗೆ ಯಾವುದೇ ವ್ಯತ್ಯಯ ಉಂಟಾಗದಂತೆ ಶೇ.100 ಗ್ಯಾಸ್ ಪೂರೈಕೆ ಖಚಿತಪಡಿಸಲು ಕ್ರಮ ಕೈಗೊಳ್ಳಲಾಗಿದೆ.
ಇನ್ನು ಹೋಟೆಲ್ ಮತ್ತು ಇತರೆ ವಾಣಿಜ್ಯ ವಲಯಗಳಿಗೆ ಕೇವಲ 10% ಗ್ಯಾಸ್ ವಿತರಣೆ ಮಾತ್ರ ಅನುಮತಿಸಲಾಗಿದೆ. ಆದರೂ, ಇಂದಿನಿಂದ ಹೋಟೆಲ್ಗಳು ಕಮರ್ಷಿಯಲ್ ಗ್ಯಾಸ್ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಈ ಹೊಸ ನಿಯಮಗಳಿಂದ ಅಗತ್ಯ ಸೇವೆಗಳು ಸುಗಮವಾಗಿ ಸಾಗುವಂತೆ ಸರ್ಕಾರ ಉದ್ದೇಶಿಸಿರುವುದು ಸ್ಪಷ್ಟವಾಗಿದೆ.