ಮುಂಬೈ, ಆ 5 (Daijiworld News/RD): ಜಮ್ಮು ಕಾಶ್ಮೀರ ಸಮಸ್ಯೆಯು ಕಳೆದ ಹಲವು ವರ್ಷಗಳಿಂದ ಬಗೆಹರಿಸಲಾಗದ ಕಬ್ಬಿಣದ ಕಡಲೆಯಾಗಿದ್ದು, ಇದೀಗ ಕೇಂದ್ರ ಸರ್ಕಾರ ಮುಂದಾಳತ್ವ ವಹಿಸಿ ಕಾಶ್ಮೀರದ ಸಮಸ್ಯೆಯನ್ನು ನಿವಾರಿಸಲು ಮುಂದಾಗಿದೆ. ಎಂದು ಖ್ಯಾತ ಬಾಲಿವುಡ್ ನಟ ಅನುಪಮ್ ಖೇರ್ ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿರುವ ಈಗಿನ ಸ್ಥಿತಿಯ ಬಗ್ಗೆ ಟ್ವೀಟ್ ಮಾಡಿದ ನಟ ಅನುಪಮ್ ಖೇರ್ ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರದ ಸಮಸ್ಯೆ ಪರಿಹಾರವಾಗಲಿದೆ ಎಂದು ಟ್ವೀಟರ್ ನಲ್ಲಿ ಹೇಳಿಕೊಂಡಿದ್ದಾರೆ. ಈ ಹಿಂದೆಯೂ ಕೂಡ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬಾರಿ ತಮ್ಮ ಧ್ವನಿ ಎತ್ತಿದ ಅನುಪಮ್ ಖೇರ್. ಕಾಶ್ಮೀರಿ ಪಂಡಿತರ ಮೇಲೆ ಆದ ದಾಳಿಯನ್ನು ತೀವ್ರವಾಗಿ ವಿರೋಧಧಿಸಿರು. ಇದೀಗ ಕಾಶ್ಮೀರಿ ಪಂಡಿತರನ್ನು ಮತ್ತೆ ಕಾಶ್ಮೀರಕ್ಕೆ ವಾಪಸ್ಸು ಕರೆತರುವ ಪ್ರಯತ್ನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಇದೀಗ ಸಂಗ್ಧಿದ ಪರಿಸ್ಥಿತಿಯು ನಿರ್ಮಾಣವಾಗಿದ್ದು, ಸಂವಿಧಾನದಲ್ಲಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದೆ. ಜಮ್ಮು ಮತ್ತು ಕಾಶ್ಮೀರವನ್ನು ಪ್ರತ್ಯೇಕ ಆಗುತ್ತದೆಯೇ ಎಂಬ ಪ್ರಶ್ನೆ ಮೂಡಿದ್ದು, ಜೊತೆಗೆ ಇದೀಗ ಕಾಶ್ಮೀರಕ್ಕೆ ಸೀಮಿತವಾಗಿರುವ 377 ಮತ್ತು 35 ಎ ವಿಧಿಯನ್ನು ತಿದ್ದುಪಡಿಸುತ್ತದೆಯೇ ಎಂಬ ವಿಚಾರ ಗ್ರಾಸವಾಗಿದೆ.