ನವದೆಹಲಿ,ಆ 5 (Daijiworld News/RD): ಇದೀಗ ನಡೆದ ರಾಜ್ಯಸಭೆ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂವಿಧಾನದಲ್ಲಿ ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ಪರಿಚ್ಛೇಧ 370 ಮತ್ತು 35(ಎ)ಯನ್ನು ರದ್ದುಗೊಳಿಸಲಾಗುವುದು ಎಂದು ಘೋಷಣೆ ಮಾಡಿದರು. ಜಮ್ಮು ಮತ್ತು ಕಾಶ್ಮೀರ ಇನ್ನೂ ಮುಂದೆ ಕೇಂದ್ರಾಡಳಿತ ಪ್ರದೇಶವಾಗಲಿದೆ. ಈಗಾಗಲೇ ರಾಷ್ಟ್ರಪತಿಯಿಂದ ಅಂಕಿತಗೊಂಡಿದೆ.
ಕಳೆದ ಹಲವು ದಶಕಗಳಿಂದ ಬಹುದೊಡ್ಡ ಸಮಸ್ಯೆಯಾಗಿ ಉಳಿದ ಜಮ್ಮು ಮತ್ತು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಣಯವನ್ನು ಕೈಗೊಂಡಿದೆ. ಇದೀಗ ಸಂವಿಧಾನದಲ್ಲಿದ್ದ370 ಮತ್ತು 35 ಎ ವಿಧಿಯನ್ನು ರದ್ದು ಮಾಡಲಾಗುವುದು ಎಂದು ಘೋಷಿಸುವ ಮೂಲಕ ಮಹತ್ವದ ಬೆಳವಣಿಗೆಗೆ ಮುಂದಾಗಿದೆ. ಆಡಳಿತಾತ್ಮಕವಾಗಿ ಸುಲಭಗೊಳಿಸುವ ಸಲುವಾಗಿ ಜಮ್ಮು, ಕಾಶ್ಮೀರ ಮತ್ತು ಲಡಾಕ್ ಎಂದು ಮೂರು ವಿಭಾಗಗಳಾಗಿ ವಿಂಗಡನೆ ಮಾಡುವ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಲಾಯ್ತು.
ಜಮ್ಮು ಕಾಶ್ಮೀರದಲ್ಲಿ ಈಗಾಗಲೇ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂವಿಧಾನದಲ್ಲಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದೆ. ಜಮ್ಮು ಮತ್ತು ಕಾಶ್ಮೀರವನ್ನು ಪ್ರತ್ಯೇಕ ಆಗುತ್ತದೆಯೇ ಎಂಬ ಪ್ರಶ್ನೆ ಮೂಡಿದ್ದು, ಜೊತೆಗೆ ಇದೀಗ ಕಾಶ್ಮೀರಕ್ಕೆ ಸೀಮಿತವಾಗಿರುವ ವಿಧಿಯನ್ನು ತಿದ್ದುಪಡಿಸುತ್ತದೆಯೇ ಎಂಬ ವಿಚಾರ ಗ್ರಾಸವಾಗಿದ್ದು ಇದೀಗ ಈಎಲ್ಲಾ ವಿಚಾರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರವು 370 ಮತ್ತು 35 ಎ ಪರಿಚ್ಛೇಧವನ್ನು ತೆಗೆದುಹಾಕುವ ಮೂಲಕ ಮಹತ್ವದ ನಿರ್ಣಯವನ್ನು ಸದನ ಕೈಗೊಂಡಿದೆ.