ನವದೆಹಲಿ,ಆ 5 (Daijiworld News/RD): ಜಮ್ಮು ಮತ್ತು ಕಾಶ್ಮೀರದಲ್ಲಿ ಮಂತ್ರಿಮಂಡಲಕ್ಕೆ ಇನ್ನು ಮುಂದೆ ಆಧಿಕಾರವಿರುವುದಿಲ್ಲ ಅದರ ಆಡಳಿತದ ಬದಲು ಗರ್ವನರ್ ಆಡಳಿತ ಜಾರಿಯಾಗಲಿದೆ ಎಂದು ಅಧಿವೇಶನದಲ್ಲಿ ತಿಳಿಸಿದೆ.
ಕಾನ್ಟ್ಯೂಯೆಂಟ್ ಅಸೆಂಬ್ಲಿ ಪದ ಬಳಕೆ ಮಾಡುವ ಬದಲು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಎಂದು ಪರಿಗಣಿಸಬೆಕು. ಜಮ್ಮು ಮತ್ತು ಕಾಶ್ಮೀರದಲ್ಲಿ ಇನ್ನು ಮುಂದೆ 370 ವಿಧಿ ಜಾರಿಯಲ್ಲಿರುವುದಿಲ್ಲ. ಇದರ ಬದಲು 397 ವಿಧಿಗೆ ತಿದ್ದುಪಡಿ ಮಸೂದೆ ಮಂಡನೆಯಾಗಲಿದೆ. ಜಮ್ಮು ಕಾಶ್ಮೀರದಿಂದ ಲಡಾಖ್ ವಿಭಜನೆ ಮಾಡಲಾಗಿದೆ ಎಂದು ಪ್ರಸ್ತಾಪಿಸಲಾಯಿತು.
ಜಮ್ಮು ಕಾಶ್ಮೀರದಲ್ಲಿ ಇನ್ನು ಯಾರು ಕೂಡ ಭೂಮಿಯನ್ನು ಖರೀದಿಸಬಹುವುದು. ಕೈಗಾರಿಕೆಗಳು ಕೂಡ ಈ ಪ್ರದೇಶದಲ್ಲಿ ಬೆಳೆಯಲಿದ್ದು, ಆರ್ಥಿಕವಾಗಿ ಅಭಿವೃದ್ಧಿಗೊಳ್ಳಲಿದೆ ಎಂದು ತಿಳಿಸಿದರು. ಇದೀಗ ಐತಿಹಾಸಿಕ ನಿರ್ಣಯವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಹೀಗಾಗಿ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುವುದರಿಂದ ಹೆಚ್ಚಿನ ಭದ್ರತೆಯನ್ನು ಕೇಂದ್ರ ನೋಡಿಕೊಳ್ಳಲಿದೆ.