ಬೆಂಗಳೂರು, ಮಾ. 24 (DaijiworldNews/TA): ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಹೋಟೆಲ್ ಉದ್ಯಮದ ನಡುವೆ, ಹೊಸೂರಿನ ಹೋಟೆಲ್ವೊಂದು ವಿಭಿನ್ನ ಹಾಗೂ ಗಮನಸೆಳೆಯುವ ಆಫರ್ ಘೋಷಿಸಿ ಎಲ್ಲರ ಗಮನ ಸೆಳೆದಿದೆ.


ಹೊಸೂರು ರಸ್ತೆಯ ಗ್ರ್ಯಾಂಡ್ ಸಿನೆಮಾಸ್ ಸಮೀಪದಲ್ಲಿರುವ ‘ಈರೋಡ್ ಅಮ್ಮಾಯಿ ಮೆಸ್’ ಹೋಟೆಲ್ ‘Help Us Cook, We’ll Feed You’ ಎಂಬ ಅಭಿಯಾನ ಆರಂಭಿಸಿದ್ದು, ಗ್ರಾಹಕರಿಂದಲೇ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ತರಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ.
1 ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ತಂದರೆ – ಒಂದು ತಿಂಗಳು ಪ್ರತಿದಿನ 1 ಬಿರಿಯಾನಿ ಉಚಿತ
2 ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ತಂದರೆ – ಒಂದು ತಿಂಗಳು ಪ್ರತಿದಿನ 2 ಬಿರಿಯಾನಿ ಉಚಿತ
ಈ ಕುರಿತು ಹೋಟೆಲ್ ಮುಂದೆ ಬೋರ್ಡ್ ಅಳವಡಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಆಫರ್ ಭಾರೀ ವೈರಲ್ ಆಗಿದೆ. ಇತ್ತೀಚಿನ ಜಾಗತಿಕ ಉದ್ವಿಗ್ನತೆ ಹಿನ್ನೆಲೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದು, ಹಲವು ಹೋಟೆಲ್ಗಳು ತೀವ್ರ ಸಮಸ್ಯೆ ಎದುರಿಸುತ್ತಿವೆ. ಅಡುಗೆ ಕಾರ್ಯಕ್ಕೆ ಅವಶ್ಯಕವಾದ ಗ್ಯಾಸ್ ಲಭ್ಯತೆ ಕಡಿಮೆಯಾಗಿರುವುದರಿಂದ, ಕೆಲವು ಹೋಟೆಲ್ಗಳು ತಾತ್ಕಾಲಿಕವಾಗಿ ಬಂದ್ ಆಗಿದ್ದು, ಇನ್ನೂ ಕೆಲವು ದುಬಾರಿ ದರದಲ್ಲಿ ಸಿಲಿಂಡರ್ ಖರೀದಿಸಿ ಗ್ರಾಹಕರಿಗೆ ಹೆಚ್ಚುವರಿ ದರ ವಿಧಿಸುತ್ತಿವೆ.
ಕೆಲವು ಕಡೆಗಳಲ್ಲಿ ಬಿಲ್ನಲ್ಲಿ ‘ಗ್ಯಾಸ್ ಶುಲ್ಕ’ ಸೇರಿಸುವ ಪರಿಸ್ಥಿತಿ ಉಂಟಾಗಿದೆ. ಗ್ಯಾಸ್ ಕೊರತೆಯಂತಹ ಗಂಭೀರ ಸಮಸ್ಯೆಯನ್ನು ಸೃಜನಾತ್ಮಕವಾಗಿ ಎದುರಿಸಲು ಹೊಸೂರಿನ ಈ ಹೋಟೆಲ್ ಕೈಗೊಂಡಿರುವ ಪ್ರಯತ್ನ ಇದೀಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದು, ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.