ನವದೆಹಲಿ, ಮಾ. 25 (DaijiworldNews/AA): ಸತತ ಕುಸಿತ ಕಂಡಿದ್ದ ಚಿನ್ನದ ದರ ಇದೀಗ ಮತ್ತೆ ಏರಿಕೆಯಾಗಿದ್ದು, ಆಭರಣ ಪ್ರಿಯರಿಗೆ ಶಾಕ್ ಉಂಟಾಗಿದೆ.

ಇಂದು ಚಿನ್ನದ ದರ ಪ್ರತಿ ಗ್ರಾಂಗೆ 345 ರಿಂದ 376 ರೂ. ವರೆಗೆ ಏರಿಕೆ ಕಂಡಿದೆ. 24 ಕ್ಯಾರೆಟ್ನ ಅಪರಂಜಿ ಚಿನ್ನ 10 ಗ್ರಾಂಗೆ 1,46,670 ರೂ. ತಲುಪಿದ್ದು, 3,760 ರೂ. ಏರಿಕೆ ಕಂಡಿದೆ. ಈ ಮೂಲಕ 1 ಗ್ರಾಂಗೆ 14,467 ರೂ. ತಲುಪಿದ್ದು, ಗ್ರಾಂಗೆ 376 ರೂ. ಏರಿಕೆಯಾಗಿದೆ. ಇನ್ನು 22 ಕ್ಯಾರೆಟ್ನ ಚಿನ್ನ 10 ಗ್ರಾಂಗೆ 1,34,450 ರೂ. ತಲುಪಿದ್ದು, 3,450 ರೂ. ಏರಿಕೆ ಕಂಡಿದೆ. ಈ ಮೂಲಕ 1 ಗ್ರಾಂಗೆ 13,445 ರೂ. ತಲುಪಿದ್ದು, ಗ್ರಾಂಗೆ 345 ರೂ. ಏರಿಕೆಯಾಗಿದೆ.
ಜೊತೆಗೆ ಬೆಳ್ಳಿ ಬೆಲೆ ಗ್ರಾಮ್ಗೆ 15ರಿಂದ 20ರೂಗಳಷ್ಟು ಏರಿದೆ. ಗ್ರಾಮ್ಗೆ 250 ರೂ ರಿಂದ 260 ರೂ. ಇದೆ. ಇದರೊಂದಿಗೆ 100 ಗ್ರಾಮ್ ಬೆಳ್ಳಿ ಬೆಲೆ 25,000 ರುಪಾಯಿ ತಲುಪಿದೆ.