ನವದೆಹಲಿ, ಮಾ. 27 (DaijiworldNews/TA) : ಹಾರ್ಮುಜ್ ಜಲಸಂಧಿ ಕೇವಲ ಸಮುದ್ರ ಮಾರ್ಗವಲ್ಲ, ಇದು ಜಾಗತಿಕ ಆರ್ಥಿಕತೆಯ ಹೃದಯವಾಗಿದೆ. ಪರ್ಷಿಯನ್ ಕೊಲ್ಲಿ ಮತ್ತು ಒಮಾನ್ ಕೊಲ್ಲಿಯ ನಡುವೆ ಕಿರಿದಾದ ಈ ಮಾರ್ಗವು, ಜಗತ್ತಿನ ಕಚ್ಚಾ ತೈಲ ಪೂರೈಕೆಯಲ್ಲಿ ಅತೀ ಮಹತ್ವದ ಪಾತ್ರ ವಹಿಸುತ್ತದೆ.

ಲಕ್ಷಾಂತರ ವರ್ಷಗಳ ಹಿಂದೆ ಭೂಫಲಕಗಳ ಚಲನೆಯಿಂದಾಗಿ ಹಾರ್ಮುಜ್ ಜಲಸಂಧಿ ರೂಪುಗೊಂಡಿತು. ಅರೇಬಿಯನ್ ಮತ್ತು ಯುರೇಷಿಯನ್ ಪ್ಲೇಟ್ಗಳ ಡಿಕ್ಕಿ ಹೊಡೆತದಿಂದ ಈ ಕಿರಿದಾದ ಕಡಲ ಹಾದಿ ಉಂಟಾಯಿತು. ಅತಿ ಕಿರಿದಾದ ಜಾಗದಲ್ಲಿ ಕೇವಲ 33 ಕಿಮೀ ಅಗಲವಿದೆ ಮತ್ತು ಬೃಹತ್ ಹಡಗುಗಳು ಸುರಕ್ಷಿತವಾಗಿ ಸಾಗಲು ಎರಡು ಮಾತ್ರ 3 ಕಿಮೀ ಅಗಲದ ಲೇನ್ಗಳಿವೆ.
ಸಿಂಧು ನದಿ ನಾಗರಿಕತೆ ಮತ್ತು ಮೆಸೊಪೊಟೋಮಿಯಾ ನಡುವಿನ ವ್ಯಾಪಾರ ಕೂಡ ಈ ಮಾರ್ಗದ ಮೂಲಕ ನಡೆಯುತ್ತಿದ್ದಿತು. 16ನೇ ಶತಮಾನದಲ್ಲಿ ಪೋರ್ಚುಗೀಸ್, ನಂತರ ಬ್ರಿಟಿಷರು 17ನೇ ಶತಮಾನದಿಂದ 20ನೇ ಶತಮಾನದವರೆಗೆ ಇದನ್ನು ನಿಯಂತ್ರಿಸುತ್ತ, ಜಾಗತಿಕ ವ್ಯಾಪಾರವನ್ನು ಆಳಿದ್ದರು.
ಸೌದಿ ಅರೇಬಿಯಾ, ಇರಾನ್, ಯುಎಇ, ಕುವೈತ್, ಇರಾಕ್ ಉತ್ಪಾದಿಸಿದ ತೈಲವು ಈ ಮಾರ್ಗದ ಮೂಲಕ ಹೊರ ಜಗತ್ತಿಗೆ ತಲುಪುತ್ತದೆ. ಪ್ರತಿದಿನ ಜಗತ್ತಿನ 20% ಕಚ್ಚಾ ತೈಲ (ಸುಮಾರು 21 ಮಿಲಿಯನ್ ಬ್ಯಾರೆಲ್ಸ್) ಹಾರ್ಮುಜ್ ಮೂಲಕ ಸಾಗುತ್ತದೆ. ಭಾರತ, ಚೀನಾ, ಜಪಾನ್ ಸೇರಿದಂತೆ ಏಷ್ಯಾದ ಆರ್ಥಿಕತೆ ಈ ತೈಲದ ಸರಬರಾಜಿಗೆ ಅವಲಂಬಿತವಾಗಿದೆ. ಸ್ವಲ್ಪ ಸಮಯವಿಗೂ ಈ ಮಾರ್ಗ ಬಂದ್ ಆದರೆ, ಜಗತ್ತಿನ ಪೆಟ್ರೋಲ್-ಡೀಸೆಲ್ ಬೆಲೆ ಗಗನಕ್ಕೇರಬಹುದು.
1980–1988ರ ಇರಾನ್-ಇರಾಕ್ ಯುದ್ಧದಲ್ಲಿ “ಟ್ಯಾಂಕರ್ ವಾರ್” ನಡೆದಿತ್ತು, ನೂರಾರು ಹಡಗುಗಳು ನಾಶವಾಯಿತು. 1988ರಲ್ಲಿ ಅಮೆರಿಕದ ನೌಕೆಯ ಮೇಲೆ ಇರಾನ್ ಮೈನ್ ಹಿಟ್ ಮಾಡಿದ್ದು, ಅಮೆರಿಕ ತಪ್ಪಾಗಿ ಇರಾನ್ ಏರ್ ಫ್ಲೈಟ್ 655 ನೆವಿಗೆ ದಾಳಿ ನಡೆಸಿತು. 290 ನಾಗರಿಕರು ಪ್ರಾಣ ಕಳೆದುಕೊಂಡರು. ಇತ್ತೀಚೆಗೆ 2019ರಲ್ಲಿ ಟ್ಯಾಂಕರ್ಗಳ ಮೇಲೆ ನಿಗೂಢ ದಾಳಿಗಳು ನಡೆದವು.
ಹಾರ್ಮುಜ್ ಜಲಸಂಧಿಯು ಸದಾ ಜಾಗತಿಕ ಆರ್ಥಿಕತೆಯ ಉಸಿರಿನಂತೆ ಉಳಿಯಲಿದೆ. ಸಣ್ಣದೊಂದು ದಾಳಿಯೂ ಪೆಟ್ರೋಲ್ ಬೆಲೆಗಳು, ಸಾರಿಗೆ ವೆಚ್ಚ, ಜನಸಾಮಾನ್ಯರ ಜೀವನದ ಮೇಲೆ ತಕ್ಷಣ ಪರಿಣಾಮ ಬೀರುತ್ತದೆ. ಇರಾನ್ ಮುಚ್ಚುವ ಬೆದರಿಕೆ ನೀಡಿದರೂ, ಸ್ನೇಹಪರ ದೇಶಗಳ ಹಡಗುಗಳು ಸುರಕ್ಷಿತವಾಗಿ ಹಾರ್ಮುಜ್ ಮೂಲಕ ಸಾಗಬಹುದು. ಭಾರತ, ಚೀನಾ, ರಷ್ಯಾ, ಇರಾಕ್, ಪಾಕಿಸ್ತಾನ ಹಾರ್ಮುಜ್ ಮೂಲಕ ತೈಲವನ್ನು ಸುರಕ್ಷಿತವಾಗಿ ಪಡೆಯುತ್ತಿವೆ.
ಹಾರ್ಮುಜ್ ಜಲಸಂಧಿಯು ಜಗತ್ತಿನ ತೈಲ ಪೂರೈಕೆಗೆ ಶ್ವಾಸದಂತೆ ಅಗತ್ಯ. ಇದನ್ನು ಮುಕ್ತವಾಗಿರಿಸುವುದು ಕೇವಲ ವ್ಯಾಪಾರವಲ್ಲ, ಜನಸಾಮಾನ್ಯರ ದಿನನಿತ್ಯದ ಆರ್ಥಿಕತೆಯ ಮೇಲೆಯೂ ನೇರ ಪರಿಣಾಮ ಬೀರುತ್ತದೆ.