ನವದೆಹಲಿ, ಮಾ. 30 (DaijiworldNews/AA): ಸುಮಾರು 94,000 ಟನ್ಗಳಷ್ಟು ಎಲ್ಪಿಜಿ ಸರಕು ಹೊತ್ತ ಎರಡು ಭಾರತೀಯ ಹಡಗುಗಳು ಯುದ್ಧಪೀಡಿತ ಹಾರ್ಮುಜ್ ಜಲಸಂಧಿಯನ್ನ ಸುರಕ್ಷಿತವಾಗಿ ದಾಟಿದ್ದು, ಸದ್ಯದಲ್ಲೇ ಈ ಹಡಗುಗಳು ಭಾರತವನ್ನು ಪ್ರವೇಶಿಸುವ ಸಾಧ್ಯತೆಯಿದೆ.

ಸುಮಾರು 94,000 ಟನ್ಗಳಷ್ಟು ಎಲ್ಪಿಜಿ ಸರಕು ಟ್ಯಾಂಕರ್ಗಳನ್ನು ಹೊತ್ತ 2 ಹಡಗುಗಳು ಹಾರ್ಮುಜ್ ಜಲಸಂಧಿಯನ್ನ ಸುರಕ್ಷಿತವಾಗಿ ದಾಟಿದ್ದು, ಭಾರತದ ತೀರಗಳತ್ತ ಸಾಗಿವೆ.BW TYR ಟ್ಯಾಂಕರ್ ಮುಂಬೈಗೆ ತೆರಳುತ್ತಿದ್ದು, ಮಾರ್ಚ್ 31 ರಂದು ಮುಂಬೈ ಬಂದರಿಗೆ ಬರುವ ನಿರೀಕ್ಷೆಯಿದೆ. ಇನ್ನೂBW TYR ಟ್ಯಾಂಕರ್ ಹೊತ್ತ ಹಡಗು ಏಪ್ರಿಲ್ 1 ರಂದು ನವ ಮಂಗಳೂರು ಬಂದರಿಗೆ ಬರುವ ನಿರೀಕ್ಷೆಯಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಮಾಹಿತಿ ನೀಡಿದೆ.
ಈಗಾಗಲೇ ಭಾರತದ 4 ಟ್ಯಾಂಕರ್ಗಳು ಹಾರ್ಮುಜ್ ಜಲಸಂಧಿಯನ್ನ ಸುರಕ್ಷಿತವಾಗಿ ದಾಟಿವೆ. ಇನ್ನೂ 3 ಹಡಗುಗಳು ಜಲಸಂಧಿಯ ಪಶ್ಚಿಮ ವಿಭಾಗದಲ್ಲಿ ಸಿಲುಕಿವೆ ಎಂದು ಎಲ್ಎಸ್ಇಜಿ ಹಡಗು ಟ್ರ್ಯಾಕಿಂಗ್ ದತ್ತಾಂಶ ತಿಳಿಸಿದೆ.