ನವದೆಹಲಿ, ಆ 06 (DaijiworldNews/SM): ಜಮ್ಮು-ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ಆರ್ಟಿಕಲ್ 370ನ್ನು ರದ್ದುಕೊಳಿಸಿ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡ ಬಳಿಕ ಇದೀಗ ಲೋಕಸಭೆಯಲ್ಲೂ ಮಸೂದೆ ಅಂಗೀಕಾರಗೊಂಡಿದೆ.
ಆ ಮೂಲಕ ಜಮ್ಮು-ಕಾಶ್ಮೀರ, ಲಡಾಕ್ ಪ್ರದೇಶಗಳಿಗೆ ಕೇಂದ್ರಾಡಳಿತ ಸ್ಥಾನಮಾನ ಸಿಗಲಿದ್ದು, ಜಮ್ಮು-ಕಾಶ್ಮೀರ ಪುನಾರಚನೆ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. ಹಾಗೂ ಮಸೂದೆ ಕಾನೂನಾಗಿ ಜಾರಿಯಾಗಿದೆ.
ಆ.06 ರ ಕಲಾಪದಲ್ಲಿ ಗೃಹ ಸಚಿವ ಅಮಿತ್ ಶಾ ಮಸೂದೆ ಮೇಲಿನ ಚರ್ಚೆ ವೇಳೆ ವಿಪಕ್ಷ ನಾಯಕರ ಆಕ್ಷೇಪಗಳಿಗೆ ಸಮರ್ಥ ಉತ್ತರ ನೀಡಿದರು. ಸುಧೀರ್ಘ ಚರ್ಚೆಯ ಬಳಿಕ ಲೋಕಸಭೆಯಲ್ಲಿ ಮಸೂದೆ ಅಂಗೀಕಾರಗೊಂಡಿದೆ. ಇದೀಗ ಹೊಸ ಕಾನೂನಾಗಿ ಜಾರಿಯಾಗಿದೆ. ಆ.05 ರ ಕಲಾಪದಲ್ಲಿ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರಗೊಂಡಿತ್ತು.