ನವದೆಹಲಿ, ಆ 07 (Daijiworld News/MSP): ಕೇಂದ್ರದ ಮಾಜಿ ವಿದೇಶಾಂಗ ಸಚಿವೆ ಹಾಗೂ ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅಗಾಧ ಪಾಂಡಿತ್ಯ, ಜನತೆಯೆಡೆಗೆ ಸೂಕ್ಷ್ಮ ಸಂವೇದನೆ, ಸ್ಪಂದನೆ ಹೊಂದಿದ್ದ ದೇಶ ಕಂಡ ಅದ್ಭುತ ರಾಜಕಾರಣಿಯಾಗಿದ್ದರು. ಅವರ ಅಗಲಿಕೆಗೆ ದೇಶವೇ ಕಂಬನಿ ಮಿಡಿಯುತ್ತಿದೆ.
ಅನಾರೋಗ್ಯದ ಹಿನ್ನಲೆಯಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಿಲ್ಲ. ಚುನಾವಣೆಯಿಂದ ನಾನು ದೂರು ಉಳಿಯುತ್ತೇನೆ ಎಂದು ಕಳೆದ ನವೆಂಬರ್ ನಲ್ಲಿಯೇ ಘೋಷಿಸಿದ್ದರು. ಈ ಸಂದರ್ಭ ಅವರ ಪತಿ ಸ್ವರಾಜ್ ಕೌಶಲ್ ಅವರು ಖುಷಿ ಪಟ್ಟಿದ್ದರು. ಚುನಾವಣೆಯಿಂದ ದೂರ ಉಳಿಯುತ್ತೇನೆ ಎಂದಾಗ ಕಳೆದ 46 ವರ್ಷಗಳಿಂದ ನಾನು ನಿನ್ನ ಬೆನ್ನ ಹಿಂದೆ ಓಡುತ್ತಿದ್ದೇನೆ. ನಾನಿನ್ನೂ 19 ವರ್ಷದ ಹುಡುಗನಾಗಿ ಉಳಿದುಕೊಂಡಿಲ್ಲ ಎಂದು ಹೇಳಿಕೊಂಡಿದ್ದರು.
ಮಾತ್ರವಲ್ಲದೆ ಸುಷ್ಮಾ ರಾಜಕೀಯ ನಿವೃತ್ತಿ ಪಡೆದ ಬಗ್ಗೆ ಸ್ವಾಗತಿಸಿ ಮಾತನಾಡಿದ ಪತಿ ಸ್ವರಾಜ್ ಕೌಶಲ್, ಮೇಡಮ್ ನೀವು ಇನ್ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ನಿರ್ಧಾರಕ್ಕೆ ನಿಮಗೆ ದೊಡ್ಡ ಧನ್ಯವಾದ. ಮಿಲ್ಕಾ ಸಿಂಗ್ ಕೂಡ ತನ್ನ ಮ್ಯಾರಥನ್ ನಿಲ್ಲಿಸುವ ಘಳಿಗೆ ಬಂದಿತ್ತು ಎಂದು ಹೇಳಿಕೊಂಡಿದ್ದರು.
1977 ರಿಂದ ನೀನು ಈ ರಾಜಕೀಯ ಓಟ ಆರಂಭಿಸಿದ್ದಿ ಅಂದರೆ ಇದೀಗ 41 ವರ್ಷ. ಈ ಸಂದರ್ಭ ನೀನು 11 ನೇರ ಚುನಾವಣೆಗಳನ್ನ ಎದುರಿಸಿದ್ದೀರಿ. ನಿನ್ನ 25ನೇ ವಯಸ್ಸಿನಿಂದಲೇ ಚುನಾವಣೆಯ ಕಣಕ್ಕೆ ಧುಮುಕಿದ್ದಿರಿ. ಚುನಾವಣೆಯಲ್ಲಿ 41 ವರ್ಷಗಳ ಹೋರಾಟ ನಡೆಸಿರುವುದು ಮ್ಯಾರಥಾನೇ ಸರಿ ಎಂದು ಸ್ವರಾಜ್ ಕೌಶಲ್ ಆಗ ಹೇಳಿದ್ದರು.