ಶ್ರೀನಗರ, ಆ.08 (Daijiworld News/RD): ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅಲ್ಲಿನ ಪ್ರಕ್ಷುಬ್ಧ ವಾತಾವರಣ, ಭದ್ರತೆಯ ಮಧ್ಯೆಯು ಕಾಶ್ಮೀರದ ವಲಸೆ ವಿದ್ಯಾರ್ಥಿಗಳಿಗೆ ತಲಾ 1 ಲಕ್ಷ ರೂ.ಗಳನ್ನು ಬಕ್ರೀದ್ ಹಬ್ಬದ ಆಚರಣೆಗಾಗಿ ಉಡುಗೊರೆಯಾಗಿ ನೀಡಿದ್ದಾರೆ.
ಶ್ರೀನಗರದಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಶುಕ್ರವಾರ ಪ್ರಾರ್ಥನೆ ಸಲ್ಲಿಸಲು ಮತ್ತು ಬಕ್ರೀದ್ ಆಚರಣೆ ಮಾಡಲು ಅಲ್ಲಿನ ಜನರಿಗೆ ಬೇಕಾದ ಅಗತ್ಯ ಹಾಗೂ ಮೂಲಭೂತ ಸೇವೆಗಳನ್ನು ಜೊತೆಗೆ ವಸ್ತುಗಳನ್ನು ನೀಡುವ ನಿಟ್ಟಿನಲ್ಲಿ ಬೇಕಾದ ಎಲ್ಲಾ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಬಕ್ರೀದ್ ಆಚರಿಸಲು ಮನೆಗೆ ಬರಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಹಬ್ಬ ಆಯೋಜಿಸಲು ತಲಾ ಒಂದು ಲಕ್ಷ ರೂ.ಗಳನ್ನು ಉಡುಗೊರೆಯಾಗಿದ್ದಾರೆ.
ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಸಲುವಾಗಿ ಮಾಂಸಗಳನ್ನು ಖರೀದಿಸಲು ಅನುಕುಲವಾಗುವಂತೆ ಜಮ್ಮು ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಪಡಿತರ ಅಂಗಡಿಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.