ದಿಸ್ಪುರ, ಏ. 03 (DaijiworldNews/TA): ಅಮಿತ್ ಶಾ ಅವರ ಹೆಲಿಕಾಪ್ಟರ್ ತಾಂತ್ರಿಕ ಸಮಸ್ಯೆಯಿಂದಾಗಿ ಅಸ್ಸಾಂನ ಗೋಲಕ್ಗುಂಜ್ನಲ್ಲಿ ಇಳಿಯಲು ವಿಫಲವಾದ ಹಿನ್ನೆಲೆ, ನಿಗದಿಯಾಗಿದ್ದ ರ್ಯಾಲಿಯನ್ನು ರದ್ದುಪಡಿಸಲಾಯಿತು.

ರ್ಯಾಲಿ ರದ್ದಾದ ನಂತರ, ಅವರು ಫೋನ್ ಮೂಲಕ ಬೆಂಬಲಿಗರ ಜೊತೆ ಮಾತನಾಡಿ ಕ್ಷಮೆಯಾಚಿಸಿದರು. ಈ ವೇಳೆ, ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ಬಿಜೆಪಿ ಅಭ್ಯರ್ಥಿ ಅಶ್ವಿನಿ ರೇ ಸರ್ಕಾರ್ ಅವರಿಗೆ ಮತ ಹಾಕುವಂತೆ ಮನವಿ ಮಾಡಿದರು. ನಂತರ ಅಮಿತ್ ಶಾ ಅವರು ಮತ್ತೊಂದು ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ದುಧ್ನೋಯ್ ಕಡೆಗೆ ಪ್ರಯಾಣ ಬೆಳೆಸಿದರು.