ನವದೆಹಲಿ, ಏ. 03 (DaijiworldNews/AA): ನ್ಯೂಕ್ಲಿಯರ್ ಸಾಮರ್ಥ್ಯದ 3ನೇ ಜಲಾಂತರ್ಗಾಮಿ ನೌಕೆ ಐಎನ್ಎಸ್ ಅರಿದಮನ್ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದು, ಇದರಿಂದ ಪರಮಾಣು ತ್ರಿಕೋನದ ನೌಕಾಪಡೆಯನ್ನು ಮತ್ತಷ್ಟು ಬಲಪಡಿಸುತ್ತದೆ.

ಭಾರತವು ಶುಕ್ರವಾರ ದೇಶೀಯವಾಗಿ ನಿರ್ಮಿಸಲಾದ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ಐಎನ್ಎಸ್ ಅರಿಧಮನ್ ಅನ್ನು ಸೇವೆಗೆ ನಿಯೋಜಿಸಿದ. ಐಎನ್ಎಸ್ ಅರಿಹಂತ್ ಮತ್ತು ಐಎನ್ಎಸ್ ಅರಿಘಾಟ್ ನಂತರ ಇದು ಭಾರತೀಯ ನೌಕಾಪಡೆಯ ಪರಮಾಣು ದರ್ಜೆಯ ಜಲಾಂತರ್ಗಾಮಿಯಾಗಿದೆ.
SSBN ಕಾರ್ಯಕ್ರಮವು ಇನ್ನೂ ಜಾಗರೂಕತೆಯಿಂದ ಕಾಯಲ್ಪಡುವ ಯೋಜನೆಯಾಗಿದೆ. ಅಮೆರಿಕ, ರಷ್ಯಾ, ಯುಕೆ, ಫ್ರಾನ್ಸ್ ಮತ್ತು ಚೀನಾ ಸೇರಿದಂತೆ ಪರಮಾಣು ಸಾಮರ್ಥ್ಯದ ಜಲಾಂತರ್ಗಾಮಿ ನೌಕೆಗಳನ್ನು ಹೊಂದಿರುವ ಆಯ್ದ ದೇಶಗಳ ಗುಂಪಿಗೆ ಇದೀಗ ಭಾರತವೂ ಸೇರ್ಪಡೆಯಾಗಿದೆ.