ಬಾಗಲಕೋಟೆ, ಏ. 04 (DaijiworldNews/AK): ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಬ್ಬರೇ ಮಾಡಿದ ಸಾಲ 5 ಲಕ್ಷ ಕೋಟಿಗೂ ಹೆಚ್ಚು ಎಂದು ಬಿಜೆಪಿ ರಾಷ್ಟಿçÃಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆಕ್ಷೇಪಿಸಿದ್ದಾರೆ.

ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ರಾಜ್ಯದ ಒಟ್ಟು ಸಾಲ 8 ಲಕ್ಷದ 32 ಸಾವಿರ ಕೋಟಿ ಆಗಿದೆ. ಅದರಲ್ಲಿ ಸಿದ್ದರಾಮಯ್ಯನವರು ಒಬ್ಬರೇ ಮಾಡಿದ ಸಾಲ 5 ಲಕ್ಷ ಕೋಟಿಗೂ ಹೆಚ್ಚು ಎಂದು ಗಮನ ಸೆಳೆದರು. 2023-24ರಲ್ಲಿ 90,280 ಕೋಟಿ, 2024-25ರಲ್ಲಿ 1 ಲಕ್ಷದ 7 ಸಾವಿರ ಕೋಟಿ, 2025-26ರಲ್ಲಿ 1 ಲಕ್ಷದ 16 ಸಾವಿರ ಕೋಟಿ, 2026-27ರಲ್ಲಿ 1 ಲಕ್ಷದ 32 ಸಾವಿರ ಕೋಟಿ ರೂ. ಎಂದು ವಿವರಿಸಿದರು.
ಒಟ್ಟು 8 ವರ್ಷದಲ್ಲಿ ಅವರು ಮುಖ್ಯಮಂತ್ರಿಯಾಗಿ ಮಾಡಿದ ಸಾಲ ಶೇ 60ರಷ್ಟಿದೆ. ಕಳೆದ 30 ವರ್ಷಗಳಲ್ಲಿ ಜೆ.ಎಚ್.ಪಟೇಲ್, ಎಸ್.ಎಂ.ಕೃಷ್ಣ, ಧರ್ಮಸಿಂಗ್, ಎಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಹೀಗೆ ಎಷ್ಟು ಜನ ಮುಖ್ಯಮಂತ್ರಿಗಳಿದ್ದರೋ ಅವರೆಲ್ಲ ಮಾಡಿದ ಸಾಲ ಶೇ 40 ಆಗಿತ್ತು. ಆದರೆ, ಸಿದ್ದರಾಮಯ್ಯ ಅವರೊಬ್ಬರೇ ಮಾಡಿದ ಸಾಲ ಶೇ 60ರಷ್ಟು ಎಂದು ತಿಳಿಸಿದರು. ಈಗ ಹೇಳಿ, ನಿಮ್ಮನ್ನು ಸಾಲದ ರಾಮಯ್ಯ ಎಂದು ಕರೆಯುವುದು ಸರಿಯೇ ಅಲ್ಲವೇ ಎಂದು ಪ್ರಶ್ನಿಸಿದರು.
ತಿಮ್ಮಾಪುರ ಅವರ ಅಬಕಾರಿ ಹಗರಣ 6 ಸಾವಿರ ಕೋಟಿ
ಬಾಗಲಕೋಟೆ ಕುಟುಂಬ ಆರ್.ಬಿ.ತಿಮ್ಮಾಪುರ ಅವರ ಅಬಕಾರಿ ಹಗರಣ 6 ಸಾವಿರ ಕೋಟಿ, ಮುಡಾ ಹಗರಣ, ದರೋಡೆ ಕಾರಣಕ್ಕೆ ನೀವು ಸುದ್ದಿಯಲ್ಲಿದ್ದಿರಿ. ಡ್ರಗ್ಸ್ ಕಾರಣಕ್ಕೆ ಸುದ್ದಿಯಲ್ಲಿದ್ದಿರಿ. ರೈತರ ಆತ್ಮಹತ್ಯೆಯಲ್ಲಿ ರಾಜ್ಯ 2ನೇ ಸ್ಥಾನದಲ್ಲಿ ಇರುವುದು ಒಳ್ಳೆಯ ಸುದ್ದಿಯೇ ಎಂದು ಕೇಳಿದರು. ಸರಕಾರಿ ನೌಕರರು, ಪ್ರಾಮಾಣಿಕ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡದ್ದು ಒಳ್ಳೆಯ ಸುದ್ದಿಯೇ ಎಂದು ಪ್ರಶ್ನಿಸಿದರು.
ವಾಟರ್ಮನ್ ಸಂಬಳ ಇಲ್ಲ ಎಂದು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡದ್ದು ಒಳ್ಳೆಯ ಸುದ್ದಿಯೇ? ಶಾಸಕನ ಭ್ರಷ್ಟಾಚಾರಕ್ಕೆ ಬೇಸತ್ತು ಒಬ್ಬ ಸಬ್ ಇನ್ಸ್ಪೆಕ್ಟರ್ ಆತ್ಮಹತ್ಯೆ ಮಾಡಿಕೊಂಡದ್ದು ಒಳ್ಳೆಯ ಸುದ್ದಿಯೇ? ಎಂದು ಕೇಳಿದರು.
ಈ ರೀತಿ ದಿನಬೆಳಗಾದರೆ ಕೆಟ್ಟ ಕಾರಣಕ್ಕೆ ಈ ಸರಕಾರ ಸುದ್ದಿಯಲ್ಲಿದೆ ಎಂದು ಟೀಕಿಸಿದರು. ಬಾಣಂತಿಯರು, ಹಸುಗೂಸುಗಳ ಸರಣಿ ಸಾವು, ಸರಕಾರಿ ಆಸ್ಪತ್ರೆಯಲ್ಲಿ ಔಷಧಿ ಸರಬರಾಜು ಇಲ್ಲ- ಇವು ಒಳ್ಳೆಯ ಸುದ್ದಿಗಳೇ ಎಂದು ಕೇಳಿದರು.