ನವದೆಹಲಿ, ಏ. 06 (DaijiworldNews/AA): ಅಮೆರಿಕದ ಕಚ್ಚಾ ತೈಲದ ಬೆಲೆ ಬ್ಯಾರಲ್ಗೆ ಶೇ. 1.8 ರಷ್ಟು ಅಂದರೆ 113.60 (10,568 ರೂಪಾಯಿ) ಡಾಲರ್ಗೆ ಏರಿಕೆಯಾಗಿದೆ.

ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ. 1.4 ರಷ್ಟು ಏರಿಕೆಯಾಗಿ 110.60 ಡಾಲರ್ಗೆ (10,287 ರೂಪಾಯಿ) ಏರಿಕೆಯಾಗಿದೆ. ಅಮೆರಿಕದ ಕಚ್ಚಾ ತೈಲದ ಬೆಲೆ ಶೇ. 1.8 ರಷ್ಟು ಏರಿಕೆಯಾಗಿ 113.60 (10,568 ರೂಪಾಯಿ) ಡಾಲರ್ಗೆ ತಲುಪಿದೆ.
ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ಇರಾನಿನ ಇಂಧನ ಸೌಲಭ್ಯಗಳ ಮೇಲೆ ದಾಳಿ ಮಾಡಲಾಗುವುದು ಎಂಬ ಡೊನಾಲ್ಡ್ ಟ್ರಂಪ್ ಅವರ ಎಚ್ಚರಿಕೆ ನೀಡಿದ್ದರು. ಈ ಎಚ್ಚರಿಕೆಯ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ.
ಇರಾನಿನ ಶತ್ರು ರಾಷ್ಟ್ರಗಳಿಗೆ ತೈಲ ಪೂರೈಕೆ ಮಾರ್ಗ ಬಂದ್ ಮಾಡಿರುವುದರಿಂದ ಜಾಗತಿಕ ಇಂಧನ ಪೂರೈಕೆ ಮೇಲೆ ಸಾಕಷ್ಟು ಪರಿಣಾಮ ಉಂಟುಮಾಡಿದೆ. ಇನ್ನು ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ, ಮಾರಕ ದಾಳಿ ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದರು. ಯುದ್ಧ ನಷ್ಟದ ಪರಿಹಾರ ನೀಡುವವರೆಗೆ ತೆರೆಯುವುದಿಲ್ಲ ಎಂದು ಇರಾನ್ ತಿರುಗೇಟು ನೀಡಿತ್ತು.