ಬೆಂಗಳೂರು, ಏ. 06 (DaijiworldNews/AA): ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಬೇಕಾದ ಕನಿಷ್ಠ ಅನಿಲವನ್ನೂ ಪೂರೈಕೆ ಮಾಡಿಲ್ಲ. ಇದರಿಂದಲೇ ಸಮಸ್ಯೆ ಆಗ್ತಿರೋದು ಎಂದು ಗೃಹಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಎಲ್ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, "ನಾವು ಕೇಂದ್ರಕ್ಕೆ ಬೇಡಿಕೆಯನ್ನ ಕೊಟ್ಟಿದ್ದೇವೆ. ಒಂದು ರಾಜ್ಯಕ್ಕೆ ಕೊಡಬೇಕಾದ ಅಲಾಟ್ಮೆಂಟ್ ಕೊಡಬೇಕು. ಒಂದಿಷ್ಟು ತೊಂದರೆ ಆಗಿದೆ. ಇದು ಎಲ್ಲಾರಿಗೂ ಗೊತ್ತಿದೆ. ಯುದ್ದದಿಂದ ಎಲ್ಲಾರಿಗೂ ತೊಂದರೆ ಆಗಿದೆ. ಕೇಂದ್ರ ಸರ್ಕಾರ ರಾಜ್ಯ ಬರಬೇಕಾದ ಅನಿಲ ಪೂರೈಕೆ ಮಾಡಿಲ್ಲ. ಕನಿಷ್ಠ ಪೂರೈಕೆಯನ್ನಾದರೂ ಮಾಡಬೇಕಲ್ವಾ? ಅದಕ್ಕಾಗಿ ಸಮಸ್ಯೆ ಆಗ್ತಿದೆ. ಎಲ್ಲಾ ರಾಜ್ಯಗಳಿಗೆ ಕೊಟ್ಟಂತೆ ನಮಗೂ ಸಮರ್ಪಕವಾಗಿ ಕೊಡಲಿ" ಎಂದರು.
"ನಮಗೆ ಗ್ಯಾಸ್, ಪೆಟ್ರೋಲ್ ಡೀಸೆಲ್ ಬೇಕು, ಎಲ್ಲಾ ರಾಜ್ಯಗಳಿಗೆ ಕೊಟ್ಟಂತೆ ನಮಗೂ ಸಮರ್ಪಕವಾಗಿ ಕೊಡಬೇಕು ಎಂದರಲ್ಲದೇ ಕಾಳಸಂತೆಯಲ್ಲಿ ಮಾರಾಟ ಮಾಡುವವರ ಮೇಲೆ ನಿಗಾವಹಿಸಲಾಗಿದೆ. ಈಗಾಗಲೇ ಕೆಲವೆಡೆ ಕೇಸ್ ಕೂಡ ಆಗಿವೆ" ಎಂದು ಹೇಳಿದರು.