ಗುವಾಹಟಿ, ಏ. 06 (DaijiworldNews/AA): ಕಾಂಗ್ರೆಸ್ ಪಾಕ್ನಿಂದ ಸಹಾಯ ಪಡೆಯುತ್ತಿದೆ. ಕಳೆದ 10 ದಿನಗಳಲ್ಲಿ, ಪಾಕಿಸ್ತಾನಿ ಚಾನೆಲ್ಗಳು ಅಸ್ಸಾಂ ಚುನಾವಣೆಯ ಬಗ್ಗೆ ಕನಿಷ್ಠ 11 ಟಾಕ್ ಶೋಗಳನ್ನು ನಡೆಸಿವೆ, ಪ್ರತಿಯೊಂದೂ ಕಾಂಗ್ರೆಸ್ ಗೆಲ್ಲುವುದಾಗಿಯೇ ಪ್ರತಿಪಾದಿಸಿವೆ ಇದರರ್ಥ ಕಾಂಗ್ರೆಸ್ ಪಾಕಿಸ್ತಾನದ ಜತೆ ಸಂಬಂಧ ಹೊಂದಿದೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ತಮ್ಮ ಪತ್ನಿ ರಿನಿಕಿ ಭೂನ್ಯಾ ಶರ್ಮಾ ಯುಎಇ, ಆಂಟಿಗುವಾ-ಬಾರ್ಬುಡಾ ಮತ್ತು ಈಜಿಪ್ಟ್ನ ಪಾಸ್ಪೋರ್ಟ್ಗಳನ್ನು ಹೊಂದಿದ್ದಾರೆ ಎಂದು ಕಾಂಗ್ರೆಸ್ ಹೊರಿಸಿರುವ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಅವರು, ತನ್ನ ಪತ್ನಿ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ. ಕಾಂಗ್ರೆಸ್ ಪಕ್ಷವು ನಕಲಿ ದಾಖಲೆಗಳ ಮೂಲಕ ಗೊಂದಲವನ್ನು ಹರಡಲು ಪ್ರಯತ್ನಿಸಿದೆ ಎಂದರು.
"ಪವನ್ ಖೇರಾ ಅವರ ಪತ್ರಿಕಾಗೋಷ್ಠಿಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಗುಂಪು ಒದಗಿಸಿದೆ ಎಂಬುದು ನಮಗೆ ತಿಳಿದುಬಂದಿದೆ. ಕಳೆದ 10 ದಿನಗಳಲ್ಲಿ, ಪಾಕಿಸ್ತಾನಿ ಚಾನೆಲ್ಗಳು ಅಸ್ಸಾಂ ಚುನಾವಣೆಯ ಬಗ್ಗೆ ಕನಿಷ್ಠ 11 ಟಾಕ್ ಶೋಗಳನ್ನು ನಡೆಸಿವೆ, ಇದು ಹಿಂದೆಂದೂ ಕಂಡಿರದ ಸಾಧನೆಯಾಗಿದೆ. ಪ್ರತಿಯೊಂದು ಟಾಕ್ ಶೋನಲ್ಲಿಯೂ, ಕಾಂಗ್ರೆಸ್ ಗೆಲ್ಲಬೇಕು ಎಂಬ ತೀರ್ಮಾನವಿತ್ತು. ನಿನ್ನೆಯ ಪತ್ರಿಕಾಗೋಷ್ಠಿಗೂ ಪಾಕಿಸ್ತಾನಿ ಸಂಪರ್ಕ ಈಗ ಸ್ಪಷ್ಟವಾಗಿದೆ. ಕಾನೂನು ಜಾರಿ ಸಂಸ್ಥೆಗಳು ಇದನ್ನು ಪರಿಶೀಲಿಸುತ್ತವೆ ಎಂಬ ವಿಶ್ವಾಸ ನನಗಿದೆ" ಎಂದು ಹೇಳಿದರು.