ಬೆಂಗಳೂರು, ಏ. 08 (DaijiworldNews/AK): ಸತತ ಮೂರು ವಾರಗಳ ನಂತರ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ. ಇರಾನ್ – ಅಮೆರಿಕ, ಇಸ್ರೇಲ್ ನಡುವಿನ ಯುದ್ಧಕ್ಕೆ 2 ಕದನ ವಿರಾಮ ಘೋಷಣೆ ಮಾಡುತ್ತಿದ್ದಂತೆಯೇ ಕಚ್ಚಾ ತೈಲದ ಬೆಲೆ ಭರ್ಜರಿ ಕುಸಿತ ಕಂಡಿದೆ. ಅಲ್ಲದೆ ಚಿನ್ನ ಮತ್ತು ಬೆಳ್ಳಿ ಬೆಲೆ ಹೆಚ್ಚಳವಾಗಿದೆ.

ಏಪ್ರಿಲ್ 8 ರಂದು 24 ಕ್ಯಾರೆಟ್ ಚಿನ್ನದ ಬೆಲೆ ಭಾರೀ ಹೆಚ್ಚಳವಾಗಿದೆ. 24 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆಯು 15,382 ರೂ. ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 1,53,820 ರೂ. ಆಗಿದೆ. ಏ.7ಕ್ಕೆ ಹೋಲಿಕೆ ಮಾಡಿದರೆ 24 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂಗೆ 398 ರೂ. ಹಾಗೂ 10 ಗ್ರಾಂಗೆ 3,980 ರೂ. ಏರಿಕೆಯಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಭಾರೀ ಹೆಚ್ಚಳವಾಗಿದೆ. 22 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆಯು 14,100 ರೂ. ಹಾಗೂ 10 ಗ್ರಾಂ ಚಿನ್ನದ ಬೆಲೆಯು 1,41,000 ರೂ. ಆಗಿದೆ. ಏ.7ಕ್ಕೆ ಹೋಲಿಕೆ ಮಾಡಿದರೆ 22 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆ 365 ರೂ. ಹಾಗೂ 10 ಗ್ರಾಂನ ಮೇಲೆ 3,650 ರೂ. ಹೆಚ್ಚಳವಾಗಿದೆ.
ಇನ್ನು18 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆಯು 11,537 ರೂ. ಹಾಗೂ 10 ಗ್ರಾಂನ ಮೇಲೆ 1,15,370 ರೂ. ಆಗಿದೆ. 18 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆಯು 299 ರೂ. ಹಾಗೂ 10 ಗ್ರಾಂನ ಮೇಲೆ 2,990 ರೂ. ಹೆಚ್ಚಳವಾಗಿದೆ.
ಚಿನ್ನದೊಂದಿಗೆ ಬೆಳ್ಳಿಯ ಬೆಲೆಯಲ್ಲೂ ಭಾರೀ ಹೆಚ್ಚಳವಾಗಿದೆ. ಒಂದು ಗ್ರಾಂ ಬೆಳ್ಳಿಗೆ 10 ರೂ. ಏರಿಕೆಯಾಗಿದೆ. ಈ ಮೂಲಕ ಒಂದು ಗ್ರಾಂ ಬೆಲೆ 260 ರೂ. ಹಾಗೂ ಒಂದು ಕೆ.ಜಿ ಬೆಳ್ಳಿ ಬೆಲೆ 2.60 ಲಕ್ಷ ರೂ. ಆಗಿದೆ. ಏ.7 ರಂದು ಬೆಳ್ಳಿ ಬೆಲೆ ಕ.ಜಿಗೆ 2,50,000 ರೂ. ಇತ್ತು.