ಮೈಸೂರು, ಏ. 08 (DaijiworldNews/AK): ಕೋಚಿಂಗ್ ಪಡೆಯದೇ ಪಾಸ್ ಮಾಡಿರುವ ಮೈಸೂರು ಮೂಲದ ಎ ಸಿ ಪ್ರೀತಿ ಎಂಬುವವರು ಯುಪಿಎಸ್ಸಿ ಆಕಾಂಕ್ಷಿಗಳಿಗೆ ಸ್ಫೂರ್ತಿಯಾಗಿದ್ದಾರೆ.

ಎ ಸಿ ಪ್ರೀತಿ ಮೈಸೂರು ಮೂಲದ ಅಂಕನಹಳ್ಳಿ ಗ್ರಾಮದವರು. ಎಂಎಸ್ಸಿ ಪದವೀಧರೆ. 2024ನೇ ಸಾಲಿನ ಯುಪಿಎಸ್ಸಿ ಸಿಎಸ್ಇ ಪರೀಕ್ಷೆಯಲ್ಲಿ ಮೂರನೇ ಪ್ರಯತ್ನವಾಗಿದ್ದು, 263ನೇ ರ್ಯಾಂಕ್ನಲ್ಲಿ, ಅದು ಸಹ ಯಾವುದೇ ಕೋಚಿಂಗ್ ಪಡೆಯದೇ ಐಎಎಸ್ ಆದರು.
ಪ್ರೀತಿ - ಮೈಸೂರು ಸಾಲಿಗ್ರಾಮ ತಾಲ್ಲೂಕಿನ ಮಾಯಿಗೌಡನಹಳ್ಳಿ - ಅಂಕನಹಳ್ಳಿಯ ಕೃಷಿಕರಾದ ಚನ್ನಬಸಪ್ಪ, ನೇತ್ರಾವತಿ ದಂಪತಿ ಪುತ್ರಿ. 10ನೇ ತರಗತಿವರೆಗೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದಿದರು. ನಂತರ ಕೃಷ್ಣರಾಜನಗರ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಸೇರ್ಪಡೆ ಆದರು. ಮಂಡ್ಯದ ವಿಸಿ ಫಾರಂನಲ್ಲಿ ಕೃಷಿ ಬಿಎಸ್ಸಿ, ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಎಂಎಸ್ಸಿ - ಸ್ನಾತಕೋತ್ತರ ಪದವಿ ಪಡೆದರು. ಆದರೆ ಇವರ ಯುಪಿಎಸ್ಸಿ ಜರ್ನಿ ಪದವಿ ಹಂತದಲ್ಲೇ ಆರಂಭವಾಗಿತ್ತು
ಎಂಎಸ್ಸಿ ಉನ್ನತ ಶಿಕ್ಷಣ ಪಡೆದಿರುವ ಪ್ರೀತಿ ಸಿವಿಲ್ ಸೇವೆಗಳ ಪರೀಕ್ಷೆ ಬರೆಯಬೇಕು ಎಂದು ನಿರ್ಧರಿಸಿದ ನಂತರ ಆಯ್ಕೆ ಮಾಡಿಕೊಂಡಿದ್ದು ಸ್ವಯಂ ಅಧ್ಯಯನ ಮಾರ್ಗಗಳನ್ನು. ಯುಪಿಎಸ್ಸಿ ಪರೀಕ್ಷೆಗೆ ಯಾವುದೇ ಕೋಚಿಂಗ್ ಪಡೆಯದೇ ಪದವಿ ಹಂತದಿಂದಲೇ ಕಠಿಣ ಶ್ರಮ ಹಾಕಿ ಓದಿಕೊಂಡರು.
ಬಡ ರೈತಾಪಿ ಕುಟುಂಬದಿಂದ ಬಂದ ಅವರು ತಂದೆ ಕೃಷಿಕರು. ಆದರೆ ಬಿಡುವಿನ ವೇಳೆ, ಸಮಯ ಸಿಕ್ಕಾಗ ಅಡುಗೆ ಭಟ್ಟರ ಕೆಲಸಕ್ಕೂ ಹೋಗುತ್ತಿದ್ದರು. ಅವರ ಬೆಂಬಲ ಹಾಗೂ ಅತಿಯಾದ ಪ್ರೋತ್ಸಾಹವೇ ಇಂದು ಯುಪಿಎಸ್ಸಿ ಪಾಸ್ ಮಾಡಲು ಕಾರಣವಾಗಿದೆ. 3ನೇ ಪ್ರಯತ್ನದಲ್ಲಿ ಪ್ರೀತಿ ಉತ್ತೀರ್ಣರಾಗಿದ್ದಾರೆ. ಆದರೆ ಹಣ ವ್ಯರ್ಥ ಮಾಡಬಾರದು ಎಂದು, ಯುಪಿಎಸ್ಸಿ ಕನಸು ಕಂಡ ನಂತರ ಪದವಿ ಹಂತದಲ್ಲೇ ಈ ಪರೀಕ್ಷೆಗೆ ಓದಲು ಆರಂಭಿಸಿದರು. ಎಲ್ಲಿಯೂ ಕೋಚಿಂಗ್ ಪಡೆಯಲಿಲ್ಲ. ಹೈದರಾಬಾದ್ನಲ್ಲಿ ಪಿಜಿಯಲ್ಲಿ ಉಳಿದು, ಅಲ್ಲಿನ ಗ್ರಂಥಾಲಯಗಳಲ್ಲಿ ಓದಿ ಯಶಸ್ಸು ಪಡೆದರು.