ಮುಂಬೈ, ಏ. 09 (DaijiworldNews/AA): ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಭಾರತದ ಧ್ವಜ ಹೊಂದಿರುವ 15,400 ಟನ್ ಎಲ್ಪಿಜಿ ಹೊತ್ತ ಟ್ಯಾಂಕರ್ ಹಾರ್ಮುಜ್ ಜಲಸಂಧಿಯನ್ನು ದಾಟಿ ಸುರಕ್ಷಿತವಾಗಿ ಬಂದಿರುವುದಾಗಿ ನವಿ ಮುಂಬೈನ ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರ ಮಾಹಿತಿ ನೀಡಿದೆ.

ಇಂದು, ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತದ ಧ್ವಜ ಹೊತ್ತ ಎಲ್ಪಿಜಿ ಹಡಗಾದ 'ಗ್ರೀನ್ ಆಶಾ' ಜವಾಹರಲಾಲ್ ನೆಹರು ಬಂದರನ್ನ ತಲುಪಿದೆ. ಇದನ್ನು ನಾವು ಹೆಮ್ಮೆಯಿಂದ ಸ್ವಾಗತಿಸಿದ್ದೇವೆ ಎಂದು ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರ ಹೇಳಿದೆ.
ಯುದ್ಧ ಪ್ರಾರಂಭವಾದ ನಂತರ JNPA ತಲುಪಿದ ಮೊದಲ ಹಡಗು ಇದಾಗಿದೆ. ಹಡಗು ಮತ್ತು ಅದರ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ. ಹಡಗು 15,400 ಟನ್ ಎಲ್ಪಿಜಿಯನ್ನು ತಂದಿದೆ ಎಂದು ತಿಳಿಸಿದೆ.