ಮಡಿಕೇರಿ,ಆ.11(Daijiworld News/RD): ರಾಜ್ಯದಲ್ಲಿ ಪ್ರವಾಹದಿಂದಾಗಿ ಜಿಲ್ಲೆಗಳು ನಲುಗಿ ಹೋಗಿದ್ದು, ಇತ್ತ ಕಾಫೀ ನಾಡು ಕೊಡಗು ಮಳೆಯಿಂದ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಈ ನಡುವೆ ವಿಪರೀತ ಭೂಕುಸಿತ ಅಲ್ಲಲ್ಲಿ ಸಂಭವಿಸಿದ್ದು, ಇಂದರಿಂದಾಗಿ ಇಂದು ತಾಯಿ ಮಗಳು ಮೃತಪಟ್ಟಿದ್ದಾರೆ. ವರುಣನ ಈ ರೌದ್ರವತಾರಕ್ಕೆ ಬಲಿಯಾದ ಈ ತಾಯಿ ಮಗಳ ಶವ ಸಂಸ್ಕಾರ ಮಾಡಲು ಹಣದ ಬೇಡಿಕೆಯಿಟ್ಟ ಶವಾಗಾರದ ಸಿಬ್ಬಂದಿ. ಅಮಾನವೀಯತೆ ತೋರಿದ ಘಟನೆ ಕೊಡಗಿನಲ್ಲಿ ನಡೆದಿದೆ
ಕಳೆದ ಬಾರಿಯು ಪ್ರವಾಹದಿಂದ ಕಂಗೆಟ್ಟಿರುವ ಮಡಿಕೇರಿಯ ಹಲವು ಜಿಲ್ಲೆಗಳು, ಈ ಬಾರಿ ಹೆಚ್ಚಿನ ಪ್ರದೇಶಗಳು ವರುಣನ ಆರ್ಭಟಕ್ಕೆ ಸಿಲುಕಿ ಜಲಾವೃತಗೊಂಡಿದೆ. ಈಗಾಗಲೇ ಜಿಲ್ಲೆಯಲ್ಲಿ ಜನರು ಆಸರೆಯ ಸೂರನ್ನು ಕಳೆದುಕೊಂಡು ನಿರಾಶ್ರಿತ ಕೇಂದ್ರದಲ್ಲಿ ರಕ್ಷಣೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರವಾಹದಿಂದಾಗಿ ಅನೇಕ ಸಾವು ನೋವು ಸಂಭವಿಸಿದ್ದು. ಹಲವಾರು ಜನ ತಮ್ಮ ಆಸ್ತಿ ಪಾಸ್ತಿಯನ್ನು ಕಳೆದುಕೊಂಡಿದ್ದಾರೆ. ಈ ನಡುವೆ ಭೂಕುಸಿತಕ್ಕೆ ಸಿಲುಕಿಕೊಂಡ ತಾಯಿ ಮಗಳು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದು, ಅವರ ಹೆಣ ಸುಡಲು ಬಂದಾಗ ಶವಗಾರದ ಸಿಬ್ಬಂದಿ ಹಣ ಕೊಟ್ಟರೆ ಮಾತ್ರ ಶವ ಸುಡುತ್ತೇನೆ ಎಂದು ಹೇಳುವ ಮೂಲಕ ಅಮಾನವೀಯತೆಯನ್ನು ವ್ಯಕ್ತಪಡಿಸಿದ್ದಾನೆ.
ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿಯಲ್ಲಿ ಪ್ರವಾಹ ಮುಂದುವರೆದಿದ್ದು, ಇತ್ತ ಮಲೆನಾಡಿನಲ್ಲೂ ಇಂದು ನದಿಗಳ ನೀರಿನ ಮಟ್ಟ ಕೊಂಚ ಕಡಿಮೆ ಆಗಿದೆ. ಕೊಡಗು ಜಿಲ್ಲೆ ಈ ವರ್ಷವೂ ಪ್ರವಾಹದ ಹೊಡೆತಕ್ಕೆ ಸಿಲುಕಿದ್ದು, ಸಂಕಷ್ಠದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಪ್ರವಾಹಪೀಡಿತ ಪ್ರದೇಶಗಳಲ್ಲಿ ಸೇನಾಪಡೆ, ನೌಕಾಪಡೆ, ವಾಯುಪಡೆಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.