ಮುಂಬೈ, ಆ.12(Daijiworld News/SS): ಬಹುನಿರೀಕ್ಷಿತ ಜಿಯೋ ಗಿಗಾ ಫೈಬರ್ ಸೇವೆ ಸೆಪ್ಟೆಂಬರ್ 5ರಂದು ದೇಶಾದ್ಯಂತ ಜಿಯೋ ಗ್ರಾಹಕರ ಲಭ್ಯವಾಗಲಿದೆ ಎಂದು ಘೋಷಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಡೆಟ್'ನ ವಾರ್ಷಿಕ ಸಭೆ ಸೋಮವಾರ ನಡೆದಿದ್ದು, ಈ ಸಂದರ್ಭದಲ್ಲಿ ಜಿಯೋ ಫೈಬರ್ ಟಾರಿಫ್ ಪ್ಯಾಕೇಜ್ ಅನ್ನು ಘೋಷಿಸಿದ್ದು, ತಿಂಗಳಿಗೆ 700 ರೂಪಾಯಿಗೆ ಪ್ಯಾಕೇಜ್ ಪ್ಲ್ಯಾನ್ ಆರಂಭವಾಗಲಿದೆ. ಅಲ್ಲದೇ ಟಾರಿಫ್ ಫ್ಲ್ಯಾನ್ ಪ್ರಕಾರ 100ಎಂಬಿಪಿಎಸ್ ಮತ್ತು 1 ಜಿಬಿಪಿಎಸ್ ಸ್ಪೀಡ್ ಹೊಂದಿರಲಿದೆ ಎಂದು ತಿಳಿಸಿದೆ.
ಜಿಯೋ ಫೈಬರ್ ಸರ್ವಿಸ್'ನಲ್ಲಿ ಜಿಯೋ ಹೋಮ್ ಫೋನ್ ಸರ್ವಿಸ್ ಕೂಡಾ ಸೇರಿದೆ. ಈ ವಯರ್ ಲೆಸ್ ಫೋನ್'ನಲ್ಲಿ ಸ್ಥಳೀಯ ಮತ್ತು ಎಸ್ ಟಿಡಿವೈಸ್ ಉಚಿತವಾಗಿ ಕರೆ ಮಾಡಬಹುದಾಗಿದೆ. ಅಂತಾರಾಷ್ಟ್ರೀಯ ಕರೆ ಕೂಡಾ ಕಡಿಮೆ ದರದಲ್ಲಿ ಲಭ್ಯವಾಗಲಿದೆ ಎಂದು ಹೇಳಿದೆ.
ಜಿಯೋ ಗಿಗಾಫೈಬರ್ ಎಫ್ ಟಿಟಿ ಎಚ್ ಬ್ಯಾಡ್ ಬ್ಯಾಂಡ್ ಸೇವೆ ಮೂಲಕ ಡಿಜಿಟಲ್ ಸೆಟಪ್ ಬಾಕ್ಸ್ ಸಂಪರ್ಕ ದೊರೆಯಲಿದೆ. ಬಂಪರ್ ಆಫರ್ ಎಂಬಂತೆ ಜಿಯೋ ಫೈಬರ್ ವಾರ್ಷಿಕ ಫ್ಲ್ಯಾನ್ ಆಯ್ದುಕೊಂಡಲ್ಲಿ ಗ್ರಾಹಕರಿಗೆ ಎಚ್ ಡಿ 4 ಕೆ ಟಿವಿ, ಸೆಟಪ್ ಬಾಕ್ಸ್ ಉಚಿತ ಎಂದು ಘೋಷಿಸಿದೆ.