ಪಶ್ಚಿಮ ಬಂಗಾಲ, ಆ 12 (Daijiworld News/SM): ಈಗಾಗಲೇ ಜಮ್ಮು ಕಾಶ್ಮೀರದಲ್ಲಿ ಹಿಡಿತ ಸಾಧಿಸಿರುವ ಕೇಂದ್ರದ ನಿರ್ಧಾರ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಆಡಳಿತ ಸುಗಮವಾಗಿಸುವ ನಿಟ್ಟಿನಲ್ಲಿ ಜಮ್ಮು ಕಾಶ್ಮೀರ ಹಾಗೂ ಲಡಾಕ್ ಎಂಭುವುದಾಗಿ ವಿಭಜಿಸಿದೆ. ಇದೀಗ ಮುಂದಿನ ಸರಧಿ ಪಶ್ಚಿಮ ಬಂಗಾಲ ಎಂಬ ಮಾತುಗಳು ಕೇಳಿಬರುತ್ತಿದ್ದು, ಅಲ್ಲಿನ ಆಡಳಿತದಲ್ಲಿರುವ ಟಿಎಂಸಿ ಪಕ್ಷ ಕೂಡ ಈ ಬಗ್ಗೆ ಆತಂಕ ವ್ಯಕ್ತಪಡಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಡಾರ್ಜಿಲಿಂಗ್ ಸಂಸದ ರಾಜ್ಯ್ ಬಿಸ್ತಾ ಗೆ ಬರೆದ ಪತ್ರ ಇದಕ್ಕೆ ಪುಷ್ಠಿ ಎಂಬಂತಿದೆ. ಗೃಹ ಸಚಿವರ ಪತ್ರಕ್ಕೆ ತೃಣಮೂಲ ಕಾಂಗ್ರೆಸ್ ತೀವ್ರ ಆತಂಕ ವ್ಯಕ್ತಪಡಿಸಿದ್ದು, ಕೇಂದ್ರದ ನಡೇಯನ್ನು ಟೀಕಿಸಿದೆ.
ರಾಷ್ಟ್ರೀಯ ರಾಜಧಾನಿಯಲ್ಲಿ ಗೋರ್ಖಾಗಳಿಗೆ ಭದ್ರತೆ ನೀಡುವಂತೆ ಸಂಸದರು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂಧಿಸಿದ್ದ ಗೃಹ ಸಚಿವರು, ಗೋರ್ಖಾ ಲ್ಯಾಂಡ್ ಹಾಗೂ ಲಡಾಕ್ ನ ಭಾಗದ ಜನತೆಯ ಕುರಿತ ನಿಮ್ಮ ಆತಂಕಗಳ ಬಗ್ಗೆ ಗಮನ ಹರಿಸುತ್ತೇವೆ ಎಂದು ಹೇಳಿದ್ದರು.
ಪತ್ರದಲ್ಲಿ ಗೋರ್ಖಾ ಲ್ಯಾಂಡ್ ಎಂಬ ಶಬ್ದ ಪ್ರಯೋಗಕ್ಕೆ ಟಿಎಂಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪಶ್ಚಿಮ ಬಂಗಾಳವನ್ನು ಬಿಜೆಪಿ ವಿಭಜಿಸಲು ಯತ್ನಿಸುತ್ತಿದೆ ಎಂಬುವುದಾಗಿ ತೃಣಮೂಲ ಕಾಂಗ್ರೆಸ್ ಆತಂಕ ವ್ಯಕ್ತಪಡಿಸಿದೆ.
ಪಶ್ಚಿಮ ಬಂಗಾಳದಲ್ಲಿ ಎಲ್ಲಿಯೂ ಗೋರ್ಖಾ ಲ್ಯಾಂಡ್ ಎಂಬ ಪ್ರದೇಶವಿಲ್ಲ. ಜಮ್ಮು-ಕಾಶ್ಮೀರದ ಮಾದರಿಯಲ್ಲಿ ಪಶ್ಚಿಮ ಬಂಗಾಳವನ್ನೂ ಇಬ್ಭಾಗ ಮಾಡುವುದು ಬಿಜೆಪಿಯ ತಂತ್ರ ಎಂದು ಟಿಎಂಸಿ ಆರೋಪಿಸಿದೆ.