ನವದೆಹಲಿ, ಆ 14 (Daijiworld News/MSP): ಜನರ ಬಳಕೆಗೆ ಅನುಕೂಲವಾಗುವಂತ ರೀತಿಯಲ್ಲಿ ಮತ್ತು ಸುರಕ್ಷತಾ ಕ್ರಮಗಳನ್ನು ಹೆಚ್ಚಿಸುವ ವಾಟ್ಸಪ್ ಇದೀಗ ಹೊಸ ಫೀಚರ್ ಪರಿಚಯಿಸಿದೆ.
ವಾಟ್ಸಪ್ ಇದೀಗ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳಿಗೆ ಬೆರಳಚ್ಚು ದೃಢೀಕರಣವನ್ನು ಪರಿಚಯಿಸಿದೆ. ಹೀಗಾಗಿ ಇನ್ಮುಂದೆ ಫಿಂಗರ್ ಪ್ರಿಂಟ್ ಮೂಲಕ ಇನ್ನು ಮುಂದೆ ವಾಟ್ಸಪ್ ಓಪನ್ ಮಾಡಬಹುದಾಗಿದೆ. ವಿಶ್ವದ ನಂಬರ್ ಒನ್ ಮೆಸೇಜಿಂಗ್ ಅಪ್ಲಿಕೇಶನ್, ಫೇಸ್ಬುಕ್ ಮಾಲೀಕತ್ವದ ವಾಟ್ಸಪ್ ಆಂಡ್ರಾಯ್ಡ್ ಬಳಕೆದಾರರಿಗೆ ಈಗ ಫಿಂಗರ್ ಪ್ರಿಂಟ್ ಲಾಕ್ ಫೀಚರ್ ನ್ನು ಪರಿಚಯಿಸಿದೆ.
ವಾಟ್ಸಪ್ ನ ಈ ಫೀಚರ್ ನಿಂದ ಸ್ಕ್ರೀನ್ ಅನ್ಲಾಕ್ ಆಗಿದ್ದರೂ ವಾಟ್ಸಪ್ಗೆ ಸೀಮಿತವಾದ ಬೆರಳಚ್ಚು ಲಾಕ್ ಬಳಸಿ ಬಳಕೆದಾರರು ಅನ್ಲಾಕ್ ಮಾಡಬೇಕಾಗಿರುವುದರಿಂದ ಬಳಕೆದಾರರ ಖಾಸಗಿ ಸಂದೇಶಗಳಿಗೆ ಹೆಚ್ಚಿನ ರಕ್ಷಣೆ ದೊರಕಲಿದೆ.
ಈ ಫೀಚರ್ ನ್ನು ಈ ಹಿಂದೆಯೇ ಐಓಎಸ್ ಬಳಕೆದಾರರಿಗೆ ವಾಟ್ಸಪ್ ನೀಡಿತ್ತು. ಆದರೆ ಈಗ ಆಂಡ್ರಾಯ್ಡ್ ಬೀಟಾ ಅವೃತ್ತಿಯ ಅಪ್ಲಿಕೇಶನ್ ಬಳಸುವ ಬಳಕೆದಾರರಿಗೆ ಈ ಫೀಚರ್ ನೀಡಿದೆ.
ಇದನ್ನು ವಾಟ್ಸಪ್ ನಲ್ಲಿರುವ ಸೆಟ್ಟಿಂಗ್ಸ್ ಆಯ್ಕೆಯನ್ನು ಬಳಸಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಸೆಟ್ಟಿಂಗ್ ನಲ್ಲಿ ಪ್ರೈವೆಸಿ ಹೋದಾಗ ಕೆಳಗಡೆ ಫಿಂಗರ್ ಪ್ರಿಂಟ್ ಲಾಕ್ ಕಾಣುತ್ತದೆ. ಇಲ್ಲಿ ಅನ್ ಲಾಕ್ ಆಯ್ಕೆಯನ್ನು ಎನೆಬಲ್ ಮಾಡಿದರೆ ಈ ಫೀಚರ್ ಲಭ್ಯವಾಗುತ್ತದೆ.