ಬೆಂಗಳೂರು, ಆ 14 (Daijiworld News/MSP): ಪೊಲೀಸ್ ಇಲಾಖೆಯಲ್ಲಿ ತೀವ್ರ ವಿವಾದದ ಬಿರುಗಾಳಿ ಎಬ್ಬಿಸಿದ್ದ ಪೋನ್ ಕದ್ದಾಳಿಕೆ ಪ್ರಕರಣದ ತನಿಖೆಗೆ ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹಿಂದೆ ಸರಿಯಲಿದ್ದಾರೆ ಎಂಬ ವಿಚಾರ ಕೇಳಿಬರುತ್ತಿದೆ.
ಈ ಬಗ್ಗೆ ಪ್ರಾಥಮಿಕ ವಿಚಾರಣೆ ನಡೆಸಿದ್ದ ತನಿಖೆಗೆ ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರು, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಆದೇಶದ ಮೇರೆಗೆ ಈ ಕದ್ದಾಲಿಕೆ ನಡೆದಿತ್ತು ಎಂದು ತಿಳಿದುಬಂದ ಹಿನ್ನಲೆಯಲ್ಲಿ ಪ್ರಕರಣದ ತನಿಖೆಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.
ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ನನ್ನ ಮೇಲಾಧಿಕಾರಿಯಾಗಿದ್ದಾರೆ. ಇವರು ಭಾಗಿಯಾಗಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ನಾನು ರಿಪೋರ್ಟ್ ಮಾಡಿಕೊಳ್ಳುವ ಅಧಿಕಾರಿಗಳ ಹೆಸರು ಈ ಪ್ರಕರಣದಲ್ಲಿ ಕೇಳಿಬಂದಿರುವುದರಿಂದ ನಾನೇ ಈ ಪ್ರಕರಣ ತನಿಖೆ ನಡೆಸಲು ಸೂಕ್ತವಲ್ಲ. ಅದ್ದರಿಂದ ತನಿಖೆ ಮುಕ್ತಿಗೊಳಿಸುವಂತೆ ಸಂದೀಪ್ ಪಾಟೀಲ್ ಇಂದು ಡಿಜಿ ಐಜಿ ನೀಲಮಣಿ ರಾಜು ಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.