ನವದೆಹಲಿ,ಅ 15 (Daijiworld News/MSP): ನಮ್ಮ ದೇಶದಲ್ಲಿ ಬದಲಾದ ಸನ್ನಿವೇಶದಲ್ಲಿ ಬಹಳಷ್ಟು ಜನರು ಇಂದು ಕೂಡಾ ಪ್ರತಿನಿತ್ಯ ತಾರತಮ್ಯ, ಅಸಹಿಷ್ಣುತೆ ಎದುರಿಸುತ್ತಿದ್ದಾರೆ ಹೀಗಾಗಿ ಇದರ ವಿರುದ್ದ ದ್ವನಿ ಎತ್ತುವ ಕೆಲಸವಾಗಬೇಕು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ಕರೆ ನೀಡಿದ್ದಾರೆ.
ಸ್ವಾತಂತ್ರ್ಯ ದಿನದ ಸಂದೇಶ ನೀಡುವ ಸಂದರ್ಭ ಮಾತನಾಡಿದ ಅವರು ದೇಶದಲ್ಲಿ ಅಸಹಿಷ್ಣುತೆ ಮತ್ತು ತಾರತಮ್ಯದ ವಿರುದ್ಧ ದ್ವನಿ ಎತ್ತುವ ಕೆಲಸವಾಗಬೇಕು. ಅಸಹಿಷ್ಣುತೆ ಮತ್ತು ತಾರತಮ್ಯ ಎನ್ನುವುದು ಇಂದು ಅಲ್ಲ ವಲಯದಲ್ಲೂ ಮುಂದುವರಿಯುತ್ತಾ ಹೋಗುತ್ತಿದೆ. ದೇಶದ ಮೂಲ ತತ್ವವಾದ ಎಂದೆಣಿಸಿಕೊಂಡಿರುವ ಸತ್ಯ, ಅಹಿಂಸೆ, ಅನುಕಂಪಗಳನ್ನು ಸರ್ಕಾರ ಕಡೆಗಣಿಸುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು
ಈ ದೇಶದಲ್ಲಿ ಧರ್ಮಾಂಧತೆ- ಮತಾಂಧತೆ, ಮೂಢನಂಬಿಕೆ, ಅಸಹಿಷ್ಣುತೆ ಅಥವಾ ಅನ್ಯಾಯಗಳಿಗೆ ಸ್ಥಾನವಿಲ್ಲ, ಆದರೆ ಇಂದು ಸನ್ನಿವೇಶ ಬದಲಾಗಿದೆ. ಹೀಗಾಗಿ ನಾಗರಿಕರು ಪ್ರತಿನಿತ್ಯ ಮೇಲು ಕೀಳು ಎನ್ನುವ ತಾರತಮ್ಯ ಹಾಗೂ , ಅಸಹಿಷ್ಣುತೆ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು.