ಪಂಜಾಬ್,ಆ 15 (Daijiworld News/RD): ಸಹೋದರ-ಸಹೋದರಿಯರಿಯರ ಸಂಬಂಧವನ್ನು ನಡುವಿನ ಬಾಂಧವ್ಯವನ್ನು ಸಾರುವ ಹಬ್ಬವೇ ರಕ್ಷಾಬಂಧನ. 73 ನೇ ಸ್ವಾತಂತ್ರ್ಯೋತ್ಸವ ಸಡಗರ ಎಲ್ಲೆಡೆ ಮನೆ ಮಾಡಿದರೆ, ಇನ್ನೊಂದೆಡೆ ಅಣ್ಣನಿಗೆ ರಾಖಿಯನ್ನು ಕಟ್ಟುವ ಮೂಲಕ ರಕ್ಷಾಬಂಧನ ಹಬ್ಬವನ್ನು ಆಚರಿಸುವ ಸಂಭ್ರಮ ಎಲ್ಲಡೆ ಮನೆಮಾಡಿದೆ. ಹೀಗಾಗಿ ತಮ್ಮ ಪ್ರಾಣವನ್ನೆ ಪಣಕ್ಕಿಟ್ಟು, ರಕ್ಷಣೆ ನೀಡಿ ಕಾಪಾಡುವ ಸೈನಿಕರಿಗೆ ರಕ್ಷಾಬಂಧನ ಕಟ್ಟಿ ಹಬ್ಬವನ್ನು ಆಚರಿಸಲಾಯಿತು. ದೇಶದ ಅಟ್ಟಾರಿ-ವಾಘಾ ಗಡಿ ಪ್ರದೇಶದಲ್ಲಿರುವ ಬಿ ಎಸ್ ಎಫ್ ಯೋಧರಿಗೆ ಮಹಿಳೆಯರು ರಾಖಿ ಕಟ್ಟುವ ಮೂಲಕ ತಮ್ಮ ವಿಶೇಷವಾಗಿ ರಕ್ಷಾಬಂಧನ ಹಬ್ಬವನ್ನು ಆಚರಿಸಿದರು.
ಸಹೋದರನಂತೆ ದೇಶದ ಗಡಿಯಲ್ಲಿ ಗಾಳಿ, ಮಳೆ, ಚಳಿಗೆ ಎದೆಗುಂದದೆ ತಮ್ಮ ಪ್ರಾಣವನ್ನೆ ಲೆಕ್ಕಿಸದೆ ರಕ್ಷಣೆ ನೀಡುವ ಸೈನಿಕರಿಗೆ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ್ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಯಿತು. ದೇಶದ ವಿವಿಧ ಕಡೆಗಳಿಂದ ವಾಘಾ ಗಡಿಗೆ ಆಗಮಿಸಿದ ಮಹಿಳೆಯರು ಯೋಧರಿಗೆ ರಾಕಿ ಕಟ್ಟುವ ಮೂಲಕ ರಕ್ಷಾ ಬಂಧನ್ ಹಬ್ಬದ ಶುಭಾಷಯ ಕೋರಿದರು. ಹೀಗೆ ಯೋಧರ ಮಾಡುವ ಕಾರ್ಯಕ್ಕೆ ಕೃತಜ್ಞತಾ ಭಾವದಂತೆ ಅವರ ಕೈ ಗೆ ರಾಖಿ ಕಟ್ಟುವ ಮೂಲಕ ಭಾತ್ರತ್ವವನ್ನು ಸಾರಿದರು. ಗಡಿಯಲ್ಲಿ ಬಂದು ಸೈನಿಕರೊಂದಿಗೆ ರಕ್ಷಾ ಬಂಧನ್ ಆಚರಿಸುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ, ದೇಶಕ್ಕಾಗಿ ಹಗಲಿರುಳು ಸೇವೆ ಸಲ್ಲಿಸುವ ಯೋಧರಿಗೆ ಈ ಮೂಲಕ ಧನ್ಯವಾದ ತಿಳಿಸಲು ಇಚ್ಛಿಸುತ್ತೆನೆ ಎಂದು ಪುಣೆಯಿಂದ ಬಂದಿದ್ದ ಯುವತಿಯೊಬ್ಬಳು ತನ್ನ ಹಬ್ಬದ ಸಂತಸವನ್ನು ಹಂಚಿಕೊಂಡಳು.