ಇಂದೋರ್,ಆ 16 (Daijiworld News/RD): 1992 ರಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮನಾಗಿದ್ದ ಬಿಎಸ್ಎಫ್ ಯೋಧ ಮೋಹನ್ ಸಿಂಗ್, ಆ ಯೋಧನಪತ್ನಿ, ತನ್ನ ಇಬ್ಬರು ಮಕ್ಕಳೊಂದಿಗೆ ಚಿಕ್ಕ ಜೋಪಡಿಯ ಗುಡಿಸಲಲ್ಲಿ ವಾಸಿಸುತ್ತಿದ್ದು, ಇದನ್ನು ಕಂಡ ಮರುಗಿದ ಯುವಕರ ತಂಡವೊಂದು ಹೊಸ ಮನೆ ನಿರ್ಮಿಸಿಕೊಡುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಹಾಗೂ ರಕ್ಷಾ ಬಂಧನ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ಸುಮಾರು ಮೂರು ದಶಕಗಳಿಂದ ಸರಿಯಾದ ಸೂರಿನಡಿಯಲ್ಲದೆ ಕಷ್ಟಪಟ್ಟು ಜೀವನ ಸಾಗಿಸುವ ಈ ಯೋಧನ ಪತ್ನಿಯ ಕಷ್ಟವನ್ನು ಸರಕಾರ ನಿರ್ಲಕ್ಷ್ಯ ವಹಿಸಿದನ್ನು ಕಾಣಬಹುವುದು. ಆದರೆ ದೇಶ ಸೇವೆ ಮಾಡಿದ ಯೋಧನ ಪತ್ನಿಯ ಈ ಪರಿಸ್ಥಿತಿಯನ್ನು ಕಂಡು ನೊಂದು ನೆರೆಹೊರೆಯ ಯುವಕರು ಮೂರು ತಿಂಗಳಿನಿಂದ 11 ಲಕ್ಷ ರೂ. ಸಂಗ್ರಹಿಸಿ ಆ ಕುಟುಂಬಕ್ಕೆ ಬೆಚ್ಚಗಿನ ಸೂರನ್ನು ಒದಗಿಸಿದ್ದಾರೆ.
ಆಕೆಯ ಮನೆಯ ಹಂಚು ಮುರಿದು ಹೋಗಿ, ಯಾವ ವೇಳೆಯಲ್ಲೂ ಅನಾಹುತ ಸಂಭವಿಸಬಹುವುದು ಅನ್ನೋ ಸ್ಥಿತಿ ನಿರ್ಮಾಣವಾಗಿದ್ದರೂ ಕೂಡ, ಸರ್ಕಾರ ಯಾವ ಸಹಾಯ ಮಾಡಲಿಲ್ಲ.ಈ ಹಿನ್ನೆಲೆಯಲ್ಲಿ 'ಒಂದು ಚೆಕ್ ಒಂದು ಸಹಿ' ಎಂಬ ಚಳುವಳಿಯನ್ನು ಯುವಕರು ಆರಂಭಿಸಿ 11 ಲಕ್ಷ ರೂ. ಹಣ ಸಂಗ್ರಹ ಮಾಡಿದ್ದರು.
ಇದರಲ್ಲಿ 10 ಲಕ್ಷ ರೂ ಮನೆಗೆ ವೆಚ್ಚ ಮಾಡಿ ಸುಸಜ್ಜಿತ ಕಾಂಕ್ರೀಟ್ ಮನೆಯನ್ನು ನಿರ್ಮಾಣ ಮಾಡಿ ರಕ್ಷಾ ಬಂಧನ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಆಗಸ್ಟ್ 15ರಂದು ಹೊಸ ಮನೆಯ ಬೀಗವನ್ನು ಹುತಾತ್ಮ ಯೋಧನ ಪತ್ನಿಗೆ ಹಸ್ತಾಂತರಿಸುವ ಮೂಲಕ ದೇಶಪ್ರೇಮವನ್ನು ಮೆರೆದಿದ್ದಾರೆ. ರಕ್ಷಾಬಂಧನದ ವಿಶೇಷ ದಿನವಾದ ಹಿನ್ನೆಲೆಯಲ್ಲಿ ಈ ವೇಳೆ ಹುತಾತ್ಮ ಯೋಧನ ಪತ್ನಿ ಅವರಿಗೆ ರಾಖಿ ಕಟ್ಟುವ ಮೂಲಕ ಕೃತಜ್ಞತೆ ತಿಳಿಸಿದರು.
ಬಾಕಿ ಉಳಿದ 1 ಲಕ್ಷ ರೂ. ಹಣದಲ್ಲಿ ಮುಖ್ಯ ರಸ್ತೆಯಲ್ಲಿ ಹುತಾತ್ಮ ಯೋಧನ ಪ್ರತಿಮೆ ಸ್ಥಾಪಿಸಲಾಗುವುದು ಎಂದು ತಿಳಿದುಬಂದಿದೆ. ಜತೆಗೆ, ಯೋಧ ಓದಿದ ಸರಕಾರಿ ಶಾಲೆಗೆ ಅವರ ಹೆಸರನ್ನಿಡಲು ನೀಡುವ ಬಗ್ಗೆ ಏರ್ಪಾಟು ನಡೆಸಿದೆ.