ಬೆಂಗಳೂರು,ಆ 16 (Daijiworld News/RD): ಪ್ರಶಾಂತ್ ನೀಲ್ ಚೊಚ್ಚಲ ನಿದೇರ್ಶನದಲ್ಲಿ ಮೂಡಿ ಬಂದ ಕೆ.ಜಿ.ಫ್. ಚಾಪ್ಟರ್ 1, ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ಚಿತ್ರ. ಚಿತ್ರದ ಮುಂದುವರಿದ ಭಾಗ ಕೆ.ಜಿ.ಫ್ ಚಾಪ್ಟರ್ 2 ಸದ್ಯ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಚಿತ್ರ ತಂಡ ಈಗಾಗಲೇ ಜನರಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟಿಸಿದೆ. ಇದರ ನಡುವೆ ಈ ಸಿನಿಮಾ ತಂಡದ ಸಹ ಕಲಾವಿದ ರಘು ಅವರನ್ನ ಕೊಲೆ ಆರೋಪದಡಿ ಬಂಧಿಸಲಾಗಿದೆ.
ಕಳೆದ ವಾರ ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಕಾರೊಂದು ಬೆಂಕಿ ಹೊತ್ತಿಕೊಂಡು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದರೊಳಗಿದ್ದ ವ್ಯಕ್ತಿ ಕೂಡ ಸಾವನ್ನಪ್ಪಿದ್ದ. ಘಟನೆ ನಡೆದಿದ್ದು, ಈ ಘಟನೆಗೆ ಸಂಬಂಧ ಪಟ್ಟಂತೆ ಯುವತಿ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆಯಾದ ವ್ಯಕ್ತಿ ಆತನ ಸ್ನೇಹಿತ ಸಿದ್ದು ಆಗಿದ್ದು, ರಘುನ ಗೆಳತಿಯೊಬ್ಬಳ ಜೊತೆ ಆತ ಅನೈತಿಕ ಸಂಬಂಧ ಹೊಂದಿದ್ದನು ಜೊತೆಗೆ ಅವಳ ಫೋಟೋ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಎಂದು ಸಂತ್ರಸ್ತೆ ರಘು ಬಳಿ ಹೇಳಿಕೊಂಡಿದ್ದಳು. ಇದರಿಂದ ಅಸಮಾಧಾನಗೊಂಡಿದ್ದ ರಘು ಕೊಲೆ ಕೃತ್ಯಕ್ಕೆ ಎಸಗಿದ್ದಾನೆ. ಹೀಗಾಗಿ ರಘು, ಯುವತಿ ಹಾಗೂ ಮತ್ತೋರ್ವ ಸೇರಿ ಈ ಕೊಲೆ ನಡೆಸಿದ್ದು, ಇದೀಗ ಪೊಲೀಸರು ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ವೇಳೆ ಯುವತಿ ತಾನು ಮೋಸ ಹೋಗಿದ್ದಕ್ಕೆ ಈ ರೀತಿ ಮಾಡಲಾಗಿದೆ ಎಂದು ತನ್ನ ತಪ್ಪೊಪ್ಪಿಕೊಂಡಿದ್ದಾಳೆ. ರಘು ಈ ಮೊದಲು ಸಾಕಷ್ಟು ಸಿನಿಮಾಗಳಿಗೆ ಸ್ಟಂಟ್ಮನ್ ಆಗಿ ಕೆಲಸ ಮಾಡಿದ್ದು, ಪ್ರಸ್ತುತ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಕೆಜಿಎಫ್ 2’ ಸಿನಿಮಾದಲ್ಲಿ ಸ್ಟಂಟ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಇದೀಗ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿ ಪ್ರಮುಖ ಆರೋಪಿಯಾಗಿದ್ದು, ಆತನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.