ಬಳ್ಳಾರಿ,ಆ 18 (Daijiworld News/RD): ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಫೋನ್ ಕದ್ದಾಲಿಕೆ ಮಾಡಿದ್ದು, ಈ ವಿಚರ ಇತ್ತೀಚೆಗೆ ಬೆಳಕಿಗೆ ಬಂದಿದ್ದು ಅಧಿಕಾರದ ದಾಹಕ್ಕೆ ಈ ರೀತಿಯ ತಪ್ಪು ದಾರಿ ಹಿಡಿಯುವು ಕೀಳು ಮಟ್ಟದ ಕೆಲಸ ಎಂದು ಶಾಸಕ ಶ್ರೀ ರಾಮುಲು ಆರೋಪ ಮಾಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಎಂ ಯಡಿಯೂರಪ್ಪ ಅವರು ಸಿಬಿಐಗೆ ವಹಿಸಿದ್ದು, ಅದನ್ನು ನಾನು ಸ್ವಾಗತಿಸುತ್ತೇನೆ. ಸರ್ಕಾರ ಉಳಿಸಿಕೊಳ್ಳುವ ಸಲುವಾಗಿ ಫೋನ್ ಟ್ಯಾಪಿಂಗ್ ಮಡುವ ಕೆಲಸಕ್ಕೆ ಮಾಡಿರುವ ಕುಮಾರಸ್ವಾಮಿ ತಾನು ಅಧಿಕರದಿಂದ ಉಳಿದುಕೊಳ್ಳುವ ಸಲುವಾಗಿ ಈ ರೀತಿ ಮಾಡುವುದು ತಪ್ಪು. ಹೀಗಾಗಿ ಸಿಬಿಐ ತನಿಖೆಯಾಗಲಿ ಸಿಬಿಐ ತನಿಖೆಯಿಂದ ಎಲ್ಲಾಆರೋಪಗಳು ಸಾಬೀತು ಆಗಲಿದೆ. ತನಿಖೆಯಲ್ಲಿ ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೋದಿಯವರು ವೈಮಾನಿಕ ಸಮೀಕ್ಷೆ ಮಾಡಿಲ್ಲ ಎಂದು ಸಿದ್ಧರಾಮಯ್ಯ ಆರೋಪ ಹೊರಿಸುತ್ತಿದ್ದು, ಆದರೆ ಸ್ವಕ್ಷೇತ್ರ ಬಾದಾಮಿಗೆ ಯಾಕೆ ಹೋಗಿಲ್ಲ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಅವರಿಗೆ ರಾಜಕೀಯ ರಂಗದಲ್ಲಿ ಮುಂದುವರಿಯುವಂತೆ ಮಾಡಿದ ಬಾದಾಮಿ ಕ್ಷೇತ್ರವನ್ನು ಕಡೆಗಣಿಸುತ್ತಿದ್ದಾರೆ. ಕಣ್ಣು ನೋವಿನಿಂದ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳುವ ಸಿದ್ಧರಾಮಯ್ಯ ಬಿರಿಯಾನಿ ತಿನ್ನುವಾಗ ಆರೋಗ್ಯವಾಗಿದ್ದಾರೆ.