ಹೈದರಾಬಾದ್,ಆ 19 (Daijiworld News/RD): ಮಗ ತನ್ನ ತಂದೆಯನ್ನೇ ತುಂಡು ತುಂಡಾಗಿ ಕತ್ತರಿಸಿ ಏಳು ಪ್ಲಾಸ್ಟಿಕ್ ಬಕೆಟ್ ನಲ್ಲಿ ತುಂಬಿಸಿದ ಘಟನೆ ತೆಲಂಗಾಣದ ಮಲ್ಕಜ್ಗಿರಿ ಜಿಲ್ಲೆಯಲ್ಲಿ ನಡೆದಿದೆ.
ಕೊಲೆ ಮಾಡಿದ ವ್ಯಕ್ತಿ ಕಿಶನ್ ಆಗಿದ್ದು, ಹಣದ ವಿಚಾರಕ್ಕೆ ತನ್ನ 80 ವರ್ಷದ ತಂದೆಯನ್ನು ಬರ್ಬರವಾಗಿ ಕೊಂದಿದ್ದಾನೆ. ಆ ಬಳಿಕ ತಂದೆಯ ದೇಹವನ್ನು 7 ಬಕೆಟ್ ಗಳಲ್ಲಿ ತುಂಬಿಸಿ ಪರಾರಿಯಾಗಿದ್ದಾನೆ.
ಈ ಕೊಲೆಯ ಬಗ್ಗೆ ಯಾರಿಗೂ ಹೇಳದಂತೆ ತನ್ನ ತಾಯಿ ಹಾಗೂ ಸಹೋದರಿಗೆ ಕಿಸನ್ ಬೆದರಿಕೆಯೊಡ್ಡಿ, ಪರಾರಿಯಾಗಿದ್ದಾನೆ. ಈ ಕೊಲೆ ಶುಕ್ರವಾರ ನಡೆದಿದ್ದು, ಭಾನುವಾರ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.