ಹಾಸನ,ಆ 19 (Daijiworld News/RD): ಯುವಕ, ಯುವತಿಯನ್ನು ಪ್ರೀತಿಸಿದ್ದು, ಮಾತ್ರವಲ್ಲದೆ ಆಕೆಯನ್ನು ಮತಾಂತರ ಆಗುವಂತೆ ಬಲವಂತ ಪಡಿಸಿ, ಕಿರುಕುಳ ನೀಡಿದ್ದಾನೆ ಎಂಬ ಆರೋಪದಡಿ ಯುವಕನನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ನಗರದಲ್ಲಿ ನಡೆದಿದೆ.
ಆರೋಪಿ 24 ವರ್ಷದ ಯೂನಿಸ್ ಆಗಿದ್ದು, ಈತ ಆಕೆಯನ್ನು ಪ್ರೀತಿಸಿ, ತನ್ನ ಧರ್ಮಕ್ಕೆ ಮತಾಂತರು ಆಗು ಎಂದು ಪೀಡಿಸುತ್ತಿದ್ದನು. ಇದರಿಂದ ಆಪ್ರಾಪ್ತೆ ಯುವತಿ ಬೇಸೆತ್ತು ಹೋಗಿದ್ದಳು. ಈ ವಿಚಾರವನ್ನು ಅರಿತ ಕೆಲ ಸಂಘಟನೆಗಳು ಪೊಲೀಸರಿಗೆ ಮಾಹಿತಿ ನೀಡಿ ಯುವತಿಯನ್ನು ರಕ್ಷಿಸಿದರು.
ಈ ಬಗ್ಗೆ ಹೇಳಿಕೆ ನೀಡಿದ ಯುವತಿ ಯೂನಿಸ್ ಮನೆಯ ಹತ್ತಿರದ ನಿವಾಸಿಯಾಗಿದ್ದು, ಒಂದು ವರ್ಷದ ಹಿಂದೆ ಪರಿಚಯವಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದೆವು. ವಿವಿಧ ಸ್ಥಳಕ್ಕೆ ಭೇಟಿ ನೀಡುತ್ತಿದ್ದೆವು. ಆತ ತನಗೆ ದೈಹಿಕ ಕಿರುಕುಳ ನೀಡಿದ್ದು, ಈ ಬಗ್ಗೆ ಮನೆಯವರಿಗೆ ತಿಳಿಸಿರಲಿಲ್ಲ. ನಮ್ಮ ಧರ್ಮ ಬೇರೆಯಾಗಿರುವುದರಿಂದ ಮನೆಯಲ್ಲಿ ನಮ್ಮ ಮದುವೆಗೆ ಒಪ್ಪಲ್ಲ ಹಾಗಾಗಿ ಓಡಾಡಿ ಹೋಗಿ ಮದುವೆ ಆಗಿ ಬಳಿಕ ನನ್ನ ಧರ್ಮಕ್ಕೆ ಮತಾಂತರ ಎಂದು ಹೇಳುತ್ತಿದ್ದ. ಆದರೆ ನಾನು ಅದಕ್ಕೆ ಒಪ್ಪಲಿಲ್ಲ. ಅಲ್ಲದೆ ನಾನು ಮನೆಯವರಿಗೆ ನಡೆದಿದ್ದನ್ನೆಲ್ಲ ತಿಳಿಸಿದ್ದು, ತನಗೆ ಕಿರುಕುಳ ನೀಡಿದ ಹಾಗೂ ತನ್ನನ್ನು ಬೇರೆಡೆಗೆ ಅಪಹರಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಎಂದು ಅಪ್ರಾಪ್ತೆ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ತನಿಖೆಯನ್ನು ಆರಂಭಿಸಿ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ, ಆರೋಪಿಯನ್ನು ಪೋಕ್ಸೋ ಮತ್ತು ಮತಾಂತರ ಯತ್ನದಡಿ ಕೇಸು ದಾಖಲಿಸಿದ್ದಾರೆ.