ಚಿಕ್ಕಮಗಳೂರು, ಆ 18 (DaijiworldNews/SM): ಫೋನ್ ಕದ್ದಾಳಿಕೆ ವಿಚಾರಣೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಯಾವ ಘನಂದಾರಿ ಕೆಲಸ ಮಾಡಿದ್ದಾರೆಂದು ಫೋನ್ ಕದ್ದಾಳಿಕೆ ಮಾಡಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಯಾವುದೇ ಸಂಸ್ಥೆಯಿಂದ ತನಿಖೆ ನಡೆಸಲಿ. ಅವರು ಏನೇ ಮಾಡಿದರೂ ನಾನು ಹೆದರುವುದಿಲ್ಲ ಎಂಬುವುದಾಗಿ ಸವಾಲೆಸೆದಿದ್ದಾರೆ.
ನಾನು ಯಾವುದೇ ತಪ್ಪು ಮಾಡದಿರುವ ಕಾರಣದಿಂದಾಗಿಯೇ ಧೈರ್ಯದಿಂದ ಇದ್ದೇನೆ. ಅಂತಹ ಪರಿಸ್ಥಿತಿ ಎದುರಾದರೆ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆಯೇ ಹೊರತು ಗೌರವ, ಸ್ವಾಭಿಮಾನ ಕಳೆದುಕೊಂಡು ಬದುಕುವುದಿಲ್ಲ ಎಂದು ಹೆಚ್ ಡಿಕೆ ತಿಳಿಸಿದ್ದಾರೆ.