ನವದೆಹಲಿ,ಆ 20 (Daijiworld News/MSP): ಬಿಕಿನಿ ಏರ್ ಲೈನ್ ಎಂದೇ ಫೇಮಸ್ ಆಗಿರೋ ವಿಯೆಟ್ನಾಂ ಮೂಲದ ವಿಯೆಟ್ ಜೆಟ್ ಏರ್ ಲೈನ್ಸ್ ಭಾರತಕ್ಕೂ ಕಾಲಿಟ್ಟಿದೆ. ತನ್ನ ಕೆಲ ವಿಶೇಷ ವಿಮಾನಗಳಲ್ಲಿ ಬಿಕಿನಿ ಧರಿಸಿದ ಗಗನಸಖಿಯರಿಂದ ಪ್ರಯಾಣಿಕರಿಗೆ ಸೇವೆ ನೀಡುವ ಮೂಲಕ ಪ್ರಸಿದ್ದಿ ಪಡೆದ ಬಿಕಿನಿ ಏರ್ ಲೈನ್ ಇನ್ನು ಭಾರತದಲ್ಲೂ ತನ್ನ ಹಾರಾಟ ಪ್ರಾರಂಭಿಸಲಿದೆ.
ವಿಯೆಟ್ ಜೆಟ್ ಏರ್ ಲೈನ್ಸ್, ಈಗಾಗಲೇ ವಿಯೆಟ್ನಾಂ ನಿಂದ ಜಪಾನ್, ಹಾಂಕಾಂಗ್, ದಕ್ಷಿಣ ಕೊರಿಯಾ, ತೈವಾನ್, ಸಿಂಗಾಪುರ, ಚೀನಾ, ಥಾಯ್ಲೆಂಡ್, ಮಲೇಶಿಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ತನ್ನ ಸೇವೆ ನೀಡುತ್ತಿದೆ
ಇದೀಗ ನವದೆಹಲಿಗೂ ತನ್ನ ವಿಮಾನ ಸೇವೆಯನ್ನು ವಿಸ್ತರಿಸಿದ್ದು, ಡಿಸೆಂಬರ್ 6ರಿಂದ ಹಾರಾಟ ನಡೆಸುತ್ತದೆ. ಆದರೆ ನವದೆಹಲಿಗೆ ಬರಲಿರುವ ವಿಮಾನದಲ್ಲಿ ಬಿಕಿನಿ ಧರಿಸಿದ ಗಗನಸಖಿಯರು ಇರುತ್ತಾರೋ ಅಥವಾ ಇಲ್ಲವೋ ಎನ್ನುವುದನ್ನು ಸಂಸ್ಥೆ ಸ್ಪಷ್ಟಪಡಿಸಿಲ್ಲ.
ಈ ವಿಮಾನ ಹೆಚ್ಚಿನ ನಿಲ್ದಾಣಗಳಲ್ಲಿ ಲ್ಯಾಂಡಿಂಗ್ ಆಗಲ್ಲ. ಹೀಗಾಗಿ ಪ್ರಯಾಣಿಕರು ಮಾರ್ಗ ಮಧ್ಯೆ ಬೇರೆ ಬೇರೆ ವಿಮಾನಗಳನ್ನು ಬದಲಿಸಬೇಕಾಗಿಲ್ಲ. ಈ ವಿಮಾನ ಪ್ರಸ್ತುತ ಭಾರತ ಮತ್ತು ವಿಯೆಟ್ನಾಂ ನಡುವೆ ಇದೆ. ಈ ವಿಮಾನ ಥೈಲ್ಯಾಂಡ್, ಸಿಂಗಾಪುರ ಅಥವಾ ಮಲೇಶಿಯಾ ಮೂಲಕ ಪ್ರಯಾಣಿಕರನ್ನು ಕರೆದೊಯ್ಯುತ್ತದೆ.