ಬೆಂಗಳೂರು,ಆ 20 (Daijiworld News/RD): ರಾಜ್ಯ ಮುಖ್ಯಮಂತ್ರಿಯಾಗಿ ಆಧಿಕಾರ ಸ್ವೀಕರಿಸಿ 26 ದಿನ ಕಳೆದಿದ್ದು, ಸಂಪುಟ ರಚನೆಯು ಕೊನೆಗೂ ನೆರೆವೇರಿದೆ. 17ಮಂದಿ ಸಚಿವರ ಮೊದಲ ಹಂತದ ಪಟ್ಟಿಯನ್ನು ಬಿಡುಗಡೆಗೊಳಿಸಿ, ಈಗಾಗಲೇ ರಾಜಭವನದಲ್ಲಿ ಸರಳ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಇದೀಗ ನೂತನ ಸಚಿವರಿಗೆ ಹಂಚಿಕೆಯಾದ ಮಂತ್ರಿ ಪದವಿ ಈ ರೀತಿಯಾಗಿದೆ.
1 ಆರ್.ಅಶೋಕ್ – ಗೃಹ, ಬೆಂಗಳೂರು ಅಭಿವೃದ್ಧಿ
2 ಈಶ್ವರಪ್ಪ – ಲೋಕೋಪಯೋಗಿ
3 ಜಗದೀಶ್ ಶೆಟ್ಟರ್ – ಕಂದಾಯ
4 ಶ್ರೀರಾಮುಲು – ಸಮಾಜ ಕಲ್ಯಾಣ
5 ಗೋವಿಂದ ಕಾರಜೋಳ – ಜಲ ಸಂಪನ್ಮೂಲ
6 ಸಿಟಿ ರವಿ – ಉನ್ನತ ಶಿಕ್ಷಣ, ಅರಣ್ಯ
7ಜೆಸಿ ಮಾಧುಸ್ವಾಮಿ – ಕೃಷಿ
8 ಡಾ.ಅಶ್ವಥ್ನಾರಾಯಣ್ – ವೈದ್ಯಕೀಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ
9. ಲಕ್ಷ್ಮಣ ಸವದಿ – ಸಕ್ಕರೆ, ತೋಟಗಾರಿಕೆ
10 ಸುರೇಶ್ ಕುಮಾರ್ – ಕಾನೂನು, ಸಂಸದೀಯ, ಪ್ರಾಥಮಿಕ ಶಿಕ್ಷಣ
11 ವಿ.ಸೋಮಣ್ಣ – ವಸತಿ ನಗಾರಭಿವೃದ್ಧಿ
12 ಬಸವರಾಜ ಬೊಮ್ಮಾಯಿ – ಗ್ರಾಮೀಣ ಅಭಿವೃದ್ಧಿ
13. ಕೋಟಾ ಶ್ರೀನಿವಾಸ್ ಪೂಜಾರಿ – ಮುಜುರಾಯಿ, ಬಂದರು, ಮೀನುಗಾರಿಕೆ
14. ಸಿಸಿ ಪಾಟೀಲ್ – ಕನ್ನಡ ಮತ್ತು ಸಂಸ್ಕೃತಿ
15. ನಾಗೇಶ್ – ಸಣ್ಣ ಕೈಗಾರಿಕೆ, ಕಾರ್ಮಿಕ
16. ಪ್ರಭು ಚೌಹಾಣ್ – ಕ್ರೀಡೆ ಮತ್ತು ಯುವ ಸಬಲೀಕರಣ
17. ಶಶಿಕಲಾ ಜೊಲ್ಲೆ – ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಈ ಸಂದರ್ಭದಲ್ಲಿ ಎಲ್ಲಾ ಶಾಸಕರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇನ್ನೂ ಮಲ್ಲೇಶ್ವರಂ ಶಾಸಕ ಅಶ್ವತ್ಥ ನಾರಾಯಣ, ಬಿ, ಶ್ರೀರಾಮುಲು ಸೇರಿದಂತೆ ಹಲವು ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಶೀರ್ವಾದ ಪಡೆದರು.