ಬೆಂಗಳೂರು,ಆ 20 (Daijiworld News/RD): ಮುಖ್ಯಮಂತ್ರಿ ನೇತೃತ್ವದಲ್ಲಿ ನೂತನ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ನೆರೆ ಸಂತ್ರಸ್ಥರಿಗೆ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಿಸುವ ಮೂಲಕ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ಕೋಟಾ ಶ್ರೀನಿವಾಸ ಪೂಜಾರಿ, ಚಿಕ್ಕೋಡಿ ಉಪ ವಿಭಾಗಕ್ಕೆ ಶಶಿಕಲಾ ಜೊಲ್ಲೆ, ಬೆಳಗಾವಿ ಜಿಲ್ಲೆಗೆ ಲಕ್ಷ್ಮಣ ಸವದಿ, ಹಾಸನ ಮತ್ತು ಚಿಕ್ಕಮಗಳೂರು ಸಿ.ಟಿ.ರವಿ ಹಾಗೂ ಜೆ ಸಿ ಮಾಧುಸ್ವಾಮಿ, ಮೈಸೂರು ಜಿಲ್ಲೆಗೆ ಆರ್.ಅಶೋಕ್, ಯಾದಗಿರಿ ಜಿಲ್ಲೆಗೆ ಪ್ರಭುಚೌಹಾಣ್, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ಶ್ರೀರಾಮುಲು, ಗದಗ ಕೊಪ್ಪಳ ಜಿಲ್ಲೆಗಳಿಗೆ ಸಿಸಿ ಪಾಟೀಲ್, ಕೊಡಗು ಜಿಲ್ಲೆಗೆ ಸುರೇಶ್ ಕುಮಾರ್, ಚಾಮರಾಜನಗರ ಜಿಲ್ಲೆಗೆ ವಿ ಸೋಮಣ್ಣ, ಬಾಗಲಕೋಟೆ ಜಿಲ್ಲೆಗೆ ಈಶ್ವರಪ್ಪ, ವಿಜಯಪುರ ಜಿಲ್ಲೆಗೆ ಗೋವಿಂದ ಕಾರಜೋಳ, ಹಾವೇರಿ ಜಿಲ್ಲೆಗೆ ಬಸವರಾಜ್ ಬೊಮ್ಮಾಯಿ, ಧಾರವಾಡ, ಉತ್ತರ ಕನ್ನಡ ಜಿಲ್ಲೆಗೆ ಜಗದೀಶ್ ಶೆಟ್ಟರ್ ಅವರನ್ನು ನೇಮಿಸಿದ್ದಾರೆ.
ಸಂಪುಟ ಸಭೆಯಲ್ಲಿ ಈ ಬಗ್ಗೆ ಈ ಸೂಚನೆ ನೀಡಿದ ಮುಖ್ಯಮಂತ್ರಿ, ಈ ಬಗ್ಗೆ ಎಸ್ ಸುರೇಶ್ ಕುಮಾರ್ ಹಾಗು ಜೆ ಸಿ ಮಾಧುಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ ನಾಳೆಯಿಂದಲೇ ನೂತನ ಸಚಿವರು ಎರಡು ದಿನಗಳ ಕಾಲ ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರವಾಸ ಮಾಡುತ್ತಿದ್ದು, ಪರಿಹಾರ ಕ್ರಮ ಕೈಗೊಂಡು, ಕಾಮಗಾರಿಗಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು. ಸಂಪುಟ ಸಭೆ ಮುಗಿಯುತ್ತಿದ್ದಂತೆಯೇ ನೆರೆ ಪೀಡಿತ ಪ್ರದೇಶಗಳಿಗೆ ತೆರಳುತ್ತೇವೆ ಎಂದು ಹೇಳಿದರು.