ನವದೆಹಲಿ, ಏ. 20 (DaijiworldNews/AA): ಕತ್ತು ಸೀಳಿ ನಿವೃತ್ತ ಆರ್ಬಿಐ ಅಧಿಕಾರಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ದೆಹಲಿಯ ಪಂಚಕುಯಿಯನ್ ಪ್ರದೇಶದಲ್ಲಿ ಸಂಭವಿಸಿದೆ.

ಮಾಧೋ ರಾಮ್ ಹತ್ಯೆಯಾದ ಅಧಿಕಾರಿ. ಅವರು ಎರಡು ವರ್ಷಗಳ ಹಿಂದೆ ಆರ್ಬಿಐ ಅಧಿಕಾರಿ ಹುದ್ದೆಯಿಂದ ನಿವೃತ್ತಿ ಹೊಂದ್ದಿದ್ದರು ಎಂದು ಹೇಳಲಾಗಿದೆ.
ಮೃತರ ಪತ್ನಿ ಸೀಮಾಪುರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದರು. ಈ ವೇಳೆ ಮನೆಯಲ್ಲಿ ಮಾಧೋ ರಾಮ್ ಒಬ್ಬರೇ ಇದ್ದಾಗ ಕತ್ತು ಸೀಳಿ ಹತ್ಯೆ ಎಸಗಲಾಗಿದೆ ಎಂದು ಕುಟುಂಬಸ್ಥರ ಮಾಹಿತಿ ನೀಡಿದ್ದಾರೆ.