ಬೆಂಗಳೂರು, ಏ. 22 (DaijiworldNews/AA): ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಜೈಲು ಪಾಲಾಗಿದ್ದ ನಟಿ ರನ್ಯಾ ರಾವ್ ಇಂದು ಜೈಲಿನಿಂದ ಬಿಡುಗಡೆ ಹೊಂದಲಿದ್ದಾರೆ.

ಕಳೆದ ಒಂದು ವರ್ಷದ ಹಿಂದೆ ರನ್ಯಾ ರಾವ್ 102 ಕೋಟಿ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ ಮಾಡಿದ್ದ ಆರೋಪದಲ್ಲಿ ಜೈಲು ಪಾಲಾಗಿದ್ದರು. ಈ ಹಿಂದೆ ಕೋರ್ಟ್ನಿಂದ ಜಾಮೀನು ಸಿಕ್ಕಿತ್ತು. ಆದರೆ ಕಾಫಿಪೋಸಾ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು.
ಕಾಫಿಪೋಸಾ ಜಾರಿಯಾಗಿ ಇಂದಿಗೆ ಒಂದು ವರ್ಷ ಕಳೆದಿದೆ. ಸಾಮಾನ್ಯವಾಗಿ ಕಳ್ಳಸಾಗಣೆ ಆರೋಪ ಹೊತ್ತಿರುವವರಿಗೆ ಕಾಫಿಪೋಸಾ ಅಡಿಯಲ್ಲಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅದರಂತೆ ಇಂದು ಕಾಫಿಪೋಸಾ ಅಂತ್ಯಗೊಂಡಿದ್ದು, ಜೈಲಿನಿಂದ ಅವರನ್ನು ಇಂದು ಸಂಜೆ ಬಿಡುಗಡೆ ಮಾಡಲಾಗುವುದು.