ನವದೆಹಲಿ,ಏ. 25 (DaijiworldNews/AK): ಆರ್ಎಸ್ಎಸ್ ಅನ್ನು "ರಾಷ್ಟ್ರೀಯ ಶರಣಾಗತಿ ಸಂಘ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶನಿವಾರ ಟೀಕಿಸಿದ್ದು, ಅದರ ನಾಯಕ ರಾಮ್ ಮಾಧವ್ ಅವರು ಅಮೆರಿಕದಲ್ಲಿ ಸಂಘಟನೆಯ ನಿಜವಾದ ಬಣ್ಣ "ಫಾರ್ಜಿ(ನಕಲಿ) ರಾಷ್ಟ್ರೀಯತೆ" ಮತ್ತು "ಶುದ್ಧ ದಾಸ್ಯ"ವನ್ನು ಬಹಿರಂಗಪಡಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಮೆರಿಕದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಮ್ ಮಾಧವ್ ಅವರ ವಿಡಿಯೋವನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದ ರಾಹಲ್ ಗಾಂಧಿ, ಅಲ್ಲಿ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕ, ಇರಾನ್ ಮತ್ತು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲು ಭಾರತ ಒಪ್ಪಿಕೊಂಡಿದೆ ಮತ್ತು ಅಮೆರಿಕ ವಿಧಿಸಿದ ಹೆಚ್ಚಿನ ಸುಂಕಗಳಿಗೆ ಒಪ್ಪಿಗಿ ಸೂಚಿಸಿದೆ ಎಂದು ಹೇಳಿದ್ದಾರೆ.
ಆದರೆ ರಾಮ್ ಮಾಧವ್ ನಂತರ ಕ್ಷಮೆಯಾಚಿಸಿದ್ದು, ಅವರು ಹೇಳಿದ್ದು "ವಾಸ್ತವಿಕವಾಗಿ ತಪ್ಪು". ಏಕೆಂದರೆ ಭಾರತ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲು ಒಪ್ಪಿಲ್ಲ ಮತ್ತು ಟ್ರಂಪ್ ಆಡಳಿತ ಶೇಕಡಾ 50 ರಷ್ಟು ಸುಂಕ ವಿಧಿಸುವುದನ್ನು "ತೀವ್ರವಾಗಿ ಪ್ರತಿಭಟಿಸಿದೆ". ಎಂದು ಹೇಳಿದ್ದಾರೆ.
ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಕ್ಸ್ನಲ್ಲಿ "ರಾಷ್ಟ್ರೀಯ ಶರಣಾಗತಿ ಸಂಘ. ನಾಗ್ಪುರದಲ್ಲಿ ಫಾರ್ಜಿ ರಾಷ್ಟ್ರೀಯತೆ ಇದೆ. ಇದು ಶುದ್ಧ ದಾಸ್ಯ. ರಾಮ್ ಮಾಧವ್ ಅವರು ಅಮೆರಿಕದಲ್ಲಿ ಸಂಘದ ನಿಜವಾದ ಬಣ್ಣವನ್ನು ಬಹಿರಂಗಪಡಿಸಿದ್ದಾರೆ" ಎಂದು ಪೋಸ್ಟ್ ಮಾಡಿದ್ದಾರೆ.