ನವದೆಹಲಿ, ಏ. 25 (DaijiworldNews/AA): ಒಳ್ಳೆಯವರ್ಯಾರೂ ಅರವಿಂದ್ ಕೇಜ್ರಿವಾಲ್ ಜೊತೆ ಕೆಲಸ ಮಾಡಲು ಸಾಧ್ಯವೇ ಇಲ್ಲ ಎಂದು ಎಎಪಿಯಿಂದ ಪಕ್ಷಾಂತರಗೊಂಡ ಸಂಸದೆ ಸ್ವಾತಿ ಮಲಿವಾಲ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ತಮ್ಮ ಹಿಂದಿನ ಪಕ್ಷವು ತನ್ನ ಮೂಲ ತತ್ವಗಳಿಂದ 'ದೂರ ಸರಿದಿದೆ' ಎಂದು ಆರೋಪಿಸಿದ ಅವರು, ಅದರ ನಾಯಕ ಅರವಿಂದ್ ಕೇಜ್ರಿವಾಲ್ ಈಗ ಹಿಂದಿನಂತೆ ಇಲ್ಲ" ಎಂದರು.
ಪ್ರಧಾನಿ ನರೇಂದ್ರ ಮೋದಿಯವರನ್ನ ಹೊಗಳಿದ ಅವರು, "ನಾನು ನನ್ನ ಮನೆಯನ್ನು ತೊರೆದಿದ್ದೇನೆ, ಏಳು ವರ್ಷಗಳ ಕಾಲ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದೆ, ನನ್ನ ಕೆಲಸವನ್ನು ತ್ಯಜಿಸಿದೆ ಮತ್ತು ಪ್ರತಿಯೊಂದು ಚಳುವಳಿಯನ್ನು ಬೆಂಬಲಿಸಿದೆ. ಆದರೆ ಹಲ್ಲೆಗೊಳಗಾದ ನಂತರ ನಾನು ಎಫ್ಐಆರ್ ದಾಖಲಿಸಲು ಪ್ರಯತ್ನಿಸಿದಾಗ, ಕೇಜ್ರಿವಾಲ್ ಅವರ ನಿವಾಸದಲ್ಲಿ ಅವರ ಸಹಾಯಕರಿಂದ ನನಗೆ ಥಳಿಸಲಾಯಿತು" ಎಂದು ತಿಳಿಸಿದರು.
"ಅಂತೆಯೇ ನಾನು ನನ್ನ ದೂರನ್ನು ಮುಂದುವರಿಸಲು ಪ್ರಯತ್ನಿಸಿದಾಗ, ಅದನ್ನು ಹಿಂಪಡೆಯಲು 'ಬೆದರಿಕೆ ಮತ್ತು ಒತ್ತಡ' ಹಾಕಲಾಯಿತು. ಎರಡು ವರ್ಷಗಳ ಕಾಲ, ನನ್ನ ಪ್ರಕರಣವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ನನ್ನ ಮೇಲೆ ಒತ್ತಡ ಹೇರಲಾಯಿತು. ಆದರೆ ನಾನು ತಲೆಬಾಗಲಿಲ್ಲ. ಇದರಿಂದಾಗಿ, ಪಕ್ಷವು ನನಗೆ ಸಂಸತ್ತಿನಲ್ಲಿ ಮಾತನಾಡಲು ಒಂದು ನಿಮಿಷವೂ ಅವಕಾಶ ನೀಡಲಿಲ್ಲ' ಎಂದು ಹೇಳಿದರು.