ಉತ್ತರಪ್ರದೇಶ, ಏ. 27 (DaijiworldNews/AK): ಲಕ್ಷಾಂತರ ಜನರು ಕೋಚಿಂಗ್ ಸೇರಿ, ವರ್ಷವಿಡೀ ಅಧ್ಯಯನ ಮಾಡುತ್ತಾರೆ. ಆದರೆ ಕೆಲವರು ಯಾವುದೇ ಕೋಚಿಂಗ್ ಇಲ್ಲದೆ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಐಎಎಸ್ ಆಗುತ್ತಾರೆ. ಇಂದು ನಾವು ಅಂತಹ ಐಎಎಸ್ ಅಧಿಕಾರಿ ಅದಿತಿ ವರ್ಷ್ಣಿ ಅವರ ಬಗ್ಗೆ ತಿಳಿಸಲಿದ್ದೇವೆ.

ಅದಿತಿ ವರ್ಷ್ನಿ ಉತ್ತರ ಪ್ರದೇಶದ ಬರೇಲಿ ನಿವಾಸಿ. ಅವರ ಶಾಲಾ ಶಿಕ್ಷಣವನ್ನು ಬರೇಲಿಯ ಬಿಷಪ್ ಕೊನ್ರಾಡ್ ಶಾಲೆಯಲ್ಲಿ ಮಾಡಿದ್ದಾರೆ. ಅವರು ಮೂವರು ಒಡಹುಟ್ಟಿದವರಲ್ಲಿ ಹಿರಿಯಳು. ಅವರ ತಂದೆ ಸ್ಥಳೀಯ ಬಟ್ಟೆ ವ್ಯಾಪಾರಿ ಮತ್ತು ತಾಯಿ ಗೃಹಿಣಿ. ಅದಿತಿ ಯುಪಿಎಸ್ಸಿ ಪರೀಕ್ಷೆಗೆ ಯಾವುದೇ ಕೋಚಿಂಗ್ಗೆ ಸೇರದೇ ಉತ್ತೀರ್ಣರಾಗಿದ್ದಾರೆ.
ಅದಿತಿ ದೆಹಲಿ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಜೀಸಸ್ ಮತ್ತು ಮೇರಿ ಕಾಲೇಜಿನಲ್ಲಿ ಬಿಎ ಆನರ್ಸ್ (BA Honours) ಪದವಿಯನ್ನು ಪಡೆದಿದ್ದಾರೆ. ಇದಾದ ನಂತರ ಅವರು ಸ್ನಾತಕೋತ್ತರ ಪದವಿಗೆ ದಾಖಲಾದರು. ಆದರೆ ಮಧ್ಯದಲ್ಲೇ ವ್ಯಾಸಂಗ ಬಿಟ್ಟು UPSCಗೆ ತಯಾರಿ ಆರಂಭಿಸಿದರು. ಅವರು ಯುಪಿಎಸ್ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಅವರು ಆಲ್ ಇಂಡಿಯಾ ರ್ಯಾಂಕ್ನಲ್ಲಿ 57ನೇ ಸ್ಥಾನ ಪಡೆದಿದ್ದಾರೆ.
UPSC ಮುಖ್ಯ ಪರೀಕ್ಷೆಯಲ್ಲಿ ಸಮಾಜಶಾಸ್ತ್ರವು ಅವರ ಐಚ್ಛಿಕ ವಿಷಯವಾಗಿತ್ತು. UPSC ಫಲಿತಾಂಶ ಬಂದಾಗ, ಅವನ ನಿಜಕ್ಕೂ ಶಾಕ್ ಆಗಿದ್ದರು. ಹಾಗಾಗಿ ಫಲಿತಾಂಶದ PDF ಫೈಲ್ ಅನ್ನು ಎರಡು ಬಾರಿ ಡೌನ್ಲೋಡ್ ಮಾಡಿದಕೊಂಡಿದ್ದಾರೆ. ಮನೆಯಲ್ಲಿ ಗೃಹಿಣಿಯಾಗಿರುವ ಅವರ ತಾಯಿಗೆ ಐಎಎಸ್ ಆಗುವ ಕನಸಿತ್ತಂತೆ , ಆದರೆ ಸಾಧ್ಯವಾಗಿರಲಿಲ್ಲ, ಇದೀಗ ಮಗಳು ಅಮ್ಮನ ಕನಸನ್ನು ಇಡೇರಿಸಿದ್ದಾರೆ. ಸಮರ್ಪಣೆ, ಶಿಸ್ತು ಮತ್ತು ಬಲವಾದ ಅಧ್ಯಯನ ಯೋಜನೆಯಿಂದ ಯಶಸ್ಸನ್ನು ಸಾಧಿಸಬಹುದು ಎನ್ನವುದಕ್ಕೆ ಅದಿತಿ ಸಾಕ್ಷಿ.