ಬೆಂಗಳೂರು, ಏ. 28 (DaijiworldNews/AA): ದಿನನಿತ್ಯ ಬಳಸುವ ಅರಿಶಿಣಪುಡಿ ಹಾಗೂ ಮಸಾಲೆ ಪೌಡರ್ ಗಳಲ್ಲಿ ಸೀಸದ ಅಂಶ ಪತ್ತೆಯಾಗಿದ್ದು, ರಾಜ್ಯಾದ್ಯಂತ ಮಸಾಲೆ ಪೌಡರ್, ಅರಿಶಿಣ ಪುಡಿ ಪರೀಕ್ಷೆಗೆ ಸರ್ಕಾರ ಆದೇಶ ಹೊರಡಿಸಿದೆ.

ಅರಿಶಿಣ ಪುಡಿ ಮತ್ತು ಬೇರುಗಳಲ್ಲಿ ಸೀಸದ ಅಂಶ ಕಲಬೆರಕೆ ಮಾಡುತ್ತಿದ್ದಾರೆ. ಅರಿಶಿಣಪುಡಿ ಮತ್ತು ಮಸಾಲೆ ಪುಡಿ ಗಟ್ಟಿ ಬರಲಿ ಎಂದು ಕಲಬೆರಕೆ ಮಾಡುತ್ತಿದ್ದಾರೆ ಎಂದು ಆಹಾರ ಸುರಕ್ಷತೆ ಮತ್ತು ಔಷಧಿ ನಿಯಂತ್ರಣ ಇಲಾಖೆಗೆ ದೂರು ದಾಖಲಾಗಿದೆ. ಹೀಗಾಗಿ ರಾಜ್ಯಾದ್ಯಂತ ಮಸಾಲೆ ಪುಡಿ ಅರಿಶಿಣ ಪುಡಿ ಪರೀಕ್ಷಿಸಲು ಸರ್ಕಾರ ಆದೇಶಿಸಿದೆ.
ಅರಿಶಿಣ ಪುಡಿಗೆ ಯಾವುದೋ ಚೆಕ್ಕೆಯ ಪುಡಿಗಳನ್ನ ಬೆರೆಸುತ್ತಿದ್ದಾರೆ. ಈ ಕಲಬೆರಕೆಯಿಂದ ಕ್ಯಾನ್ಸರ್ಗೆ ಕಾರಣ ಆಗೋದು ಅಲ್ಲದೇ ಹಲವು ಹಾನಿಕಾರಕ ಅಂಶಗಳಿಗೆ ಕಾರಣ ಆಗಲಿದೆ. ಜೊತೆಗೆ ಖಾಯಿಲೆಗಳಿಗೆ ಮಾರ್ಗ ಆಗುತ್ತದೆ ಎಂದು ಸರ್ಕಾರಕ್ಕೆ ದೂರು ಸಲ್ಲಿಸಲಾಗಿದೆ. ಹೀಗಾಗಿ ರಾಜ್ಯಾದ್ಯಂತ ಮಸಾಲೆ ಪುಡಿ, ಅರಿಶಿಣ ಪುಡಿ ಸ್ಯಾಂಪಲ್ಗಳನ್ನ ಕಲೆಕ್ಟ್ ಮಾಡಿ ಟೆಸ್ಟ್ಗೆ ರವಾನಿಸಲಾಗಿದೆ.