ಶ್ರೀನಗರ,ಆ 21(Daijiworld News/RD): ಪಾಕಿಸ್ತಾನದಲ್ಲಿ ಪತನಗೊಂಡಿದ್ದ ಭಾರತದ ಯುದ್ಧವಿಮಾನದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಅರೆಸ್ಟ್ ಮಾಡಿದ್ದ ಪಾಕ್ ಸೈನಿಕ ಅಹಮದ್ ಖಾನ್ ನನ್ನು ಭಾರತೀಯ ಫಿನಿಶ್ ಮಾಡಿ, ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ.
ಫೆ. 27ರಂದು ಪಾಕಿಸ್ತಾನದಲ್ಲಿ ಭಾರತದ ಯುದ್ಧವಿಮಾನವ ಪತನಗೊಂಡಿದ್ದು, ಈ ಸಂದರ್ಭದಲ್ಲಿ ಪಾಕ್ ಸೇನೆಯು ಪೈಲಟ್ ಅಭಿನಂದನ್ ವರ್ಧಮಾನ್ ವಶಕ್ಕೆ ಪಡೆದುಕೊಂಡಿತ್ತು. ಈ ವೇಳೆ ವರ್ಧಮಾನ್ ಮೇಲೆ ಹಲ್ಲೆಯನ್ನು ನಡೆಸಿ, ಮುಖದಿಂದ ರಕ್ತ ಸೋರುತ್ತಿದ್ದ ಫೋಟೋವನ್ನು ಪಾಕ್ ರಿಲೀಸ್ ಮಾಡಿತ್ತು. ಆ ಫೋಟೋದಲ್ಲಿದ್ದ ಪಾಕಿಸ್ತಾನಿ ಸೈನಿಕ ಅಹಮದ್ ಖಾನ್ ನನ್ನು ಇತ್ತೀಚೆಗೆ ಕಾಶ್ಮೀರದ ನಕ್ಯಾಲ್ ಗಡಿ ನಿಯಂತ್ರಣ ರೇಖೆಯಲ್ಲಿ ಆತನನ್ನು ಸದೆಬಡಿಯುವ ಮೂಲಕ ಪಾಕ್ ಗೆ ಪ್ರತ್ಯುತ್ತರ ನೀಡಿದೆ.
ಕಾಶ್ಮೀರದ ನಕ್ಯಾಲ್ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ನ ಈ ಸೈನಿಕರು ಭಾರತದೊಳಗೆ ನುಸುಳಲು ಪ್ರಯತ್ನಿಸಿದ್ದ ಸಂದರ್ಭದಲ್ಲಿ ಭಾರತೀಯ ಸೈನಿಕರು ಗುಂಡಿನ ದಾಳಿ ನಡೆಸುವ ಮೂಲಕ ಪಕ್ ಸೈನಿಕರನ್ನು ಸದೆಬಡಿದಿದ್ದು, ಅಹಮದ್ ಖಾನ್ ಸಾವನ್ನಪ್ಪಿದ್ದಾನೆ.
ಫೆಬ್ರವರಿಯಲ್ಲಿ ಪಾಕ್ ವಿರುದ್ಧ ಬಾಲಕೋಟ್ ಭಾಗದಲ್ಲಿ ನಡೆಸಿದ ವಾಯುದಾಳಿಯಲ್ಲಿ ವಿಂಗ್ ಕಮಾಂಡ್ ಅಭಿನಂದನ್ ಪಾಕಿಸ್ತಾನದ ಎಫ್-16 ವಿಮಾನವನ್ನು ಹೊಡೆದುರುಳಿಸಿದ್ದರು. ಈ ವೇಳೆ ಪಾಕ್ ದಾಳಿಗೆ ತುತ್ತಾದ ಅಭಿನಂದನ್ ಅವರ ಫೈಟರ್ ಜೆಟ್ ಪತನಗೊಂಡು ಪಾಕಿಸ್ತಾನ ಸೇನೆಗೆ ಸೆರೆ ಸಿಕ್ಕಿದ್ದರು.ಸುಮಾರು 58 ಗಂಟೆಗಳ ಕಾಲ ಪಾಕಿಸ್ತಾನದ ವಶದಲ್ಲಿದ್ದ ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾಗಿತ್ತು.