ಲೇಹ್, ಏ. 30 (DaijiworldNews/AA): ಗುರುವಾರ ಮುಂಜಾನೆ ಲಡಾಖ್ನಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ(ಎನ್ಸಿಎಸ್) ಮಾಹಿತಿ ನೀಡಿದೆ.

ಗುರುವಾರ ಮುಂಜಾನೆ 3:54ರ ಸುಮಾರಿಗೆ ಭೂಕಂಪ ಸಂಭವಿಸಿದೆ. ಲೇಹ್ನಲ್ಲಿ 150 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. ಭೂಕಂಪದಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಧ್ಯಮ ತೀವ್ರತೆಯ ಭೂಕಂಪ ಇದಾಗಿದೆ ಎಂದು ಹೇಳಲಾಗಿದೆ.
ಭೂಕಂಪ ಹಿನ್ನೆಲೆ ಮನೆಯೊಳಗಿದ್ದ ನಿವಾಸಿಗಳು ತಕ್ಷಣವೇ ಹೊರಗೆ ಓಡಿ ಬಂದಿದ್ದಾರೆ. ಸ್ವಲ್ಪ ಸಮಯದ ಬಳಿಕ ಪರಿಸ್ಥಿತಿ ಸಹಜಗೊಂಡಿದೆ. ಇನ್ನು ಅಫ್ಘಾನಿಸ್ಥಾನದಲ್ಲೂ 4.3 ತೀವ್ರತೆಯ ಭೂಕಂಪವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.