ಬೆಂಗಳೂರು, ಏ. 30 (DaijiworldNews/AA): ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಬೆಂಗಳೂರು ಇವರು ಕೊಡಮಾಡುವ ಪ್ರತಿಷ್ಠಿತ ಆರ್ಯಭಟ ಅಂತರಾಷ್ಟ್ರೀಯ- 2026 ಪ್ರಶಸ್ತಿಗೆ ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರ (ರಿ) ಪುತ್ತೂರು ಇದರ ನೃತ್ಯಗುರು ಮತ್ತು ಶರ್ವಾಣಿ ಕ್ರೆಡಿಟ್ ಸೌಹಾರ್ದ ಕೋ ಅಪರೇಟಿವ್ ಸೊಸೈಟಿ ನಿ ಬಿ.ಸಿ.ರೋಡ್ ಇದರ ಅಧ್ಯಕ್ಷರಾದ, ವಿದುಷಿ ರೋಹಿಣಿ ಉದಯ್ ಇವರು ಆಯ್ಕೆಯಾಗಿರುತ್ತಾರೆ.

ವಿದುಷಿ ರೋಹಿಣಿ ಉದಯ್ ಅವರ ಭರತನಾಟ್ಯ ಕಲಾ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮೇ 23 ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಕೊಡಲಾಗುವುದು ಎಂದು ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.