ನವದೆಹಲಿ, ಆ.23(Daijiworld News/SS): ಬುಧವಾರ (ಆ.21) ರಾತ್ರಿ ಬಂಧನಕ್ಕೆ ಒಳಗಾದ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರನ್ನು ಸಿಬಿಐ ಕಸ್ಡಡಿಗೆ ಒಪ್ಪಿಸಿ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ಸಿಬಿಐ ಅಧಿಕಾರಿಗಳು ಗುರುವಾರ ಸಿಬಿಐ ಕೋರ್ಟ್ಗೆ ಹಾಜರು ಪಡಿಸಿದ್ದು, ವಾದ-ಪ್ರತಿವಾದ ಬಹುತೇಕ ಅಂತ್ಯಗೊಂಡ ನಂತರ ವಿಶೇಷ ನ್ಯಾಯಾಧೀಶರು ತೀರ್ಪು ಪ್ರಕಟಿಸಿದರು. ಐದು ದಿನಗಳ ಕಸ್ಟಡಿಗೆ ಒಪ್ಪಿಸಬೇಕು ಎಂದು ಸಿಬಿಐ ಪರ ವಕೀಲರು ಮಾಡಿದ ಮನವಿ ಪುರಸ್ಕರಿಸಿದ ಸಿಬಿಐ ವಿಶೇಷ ನ್ಯಾಯಾಲಯ, ಕಸ್ಟಡಿಗೆ ಒಪ್ಪಿಸಿ ತೀರ್ಪು ನೀಡಿದೆ. ಇನ್ನು ಐದು ರಾತ್ರಿ, ನಾಲ್ಕು ಹಗಲುಗಳನ್ನು ಚಿದಂಬರಂ ಸಿಬಿಐ ಕಸ್ಟಡಿಯಲ್ಲೇ ಕಳೆಯಲಿದ್ದಾರೆ.
ಚಿದಂಬರಂ ಅವರು ವಿಚಾರಣೆಗೆ ಸಹಕರಿಸುತ್ತಿಲ್ಲ. ಹೀಗಾಗಿ ಅವರನ್ನು ಸಿಬಿಐ ವಶಕ್ಕೆ ಒಪ್ಪಿಸಬೇಕು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದರು. ಸಿಬಿಐ ಕಸ್ಡಡಿ ಅವಧಿಯಲ್ಲಿ ಚಿದಂಬರಂ ಅವರನ್ನು ಭೇಟಿ ಮಾಡಲು ಕುಟುಂಬ ಸದಸ್ಯರಿಗೆ ಅವಕಾಶ ನೀಡಲಾಗಿದೆ.